ಮಿಡಿದ ಶೃತಿ - ಕಥೆ .
---------------------------
ನಡು ಬೀದಿಯಲ್ಲಿ ನಿಂತು ಚಿಕ್ಕಮ್ಮ ಕಿರುಚುತ್ತಿದ್ದಳು .
ಅಕ್ಕ ಪಕ್ಕದವರು ಕರುಣಾಜನಕವಾಗಿ ನನ್ನನ್ನೇ ನೋಡುತಿದ್ದರು.
ಮೈಯೆಲ್ಲಾ ನೀರಾಗಿ ತಲೆಯಿಂದ ನೀರು ತೊಟ್ಟಿಕ್ಕುತಿತ್ತು . ಚಿಕ್ಕಮ್ಮ ಕೋಪದಿಂದ ಒಂದು ಬಿಂದಿಗೆ ನೀರು ತಲೆಯ ಮೇಲೆ ಸುರಿದಿದ್ದಳು .
ಉಟ್ಟ ಸೀರೆ ಮೈಗೆ ಅಂಟಿತ್ತು.
ಇಂತಾ ಅವಮಾನಗಳು ನನಗೇನು ಹೊಸದಲ್ಲ.ಆಗಾಗ ಬರುವ ಹಬ್ಬ ದಂತೆ .ನನ್ನ ಬಾಳಿನಲ್ಲಿ ಇದು ಸಹಜ ಎನ್ನುವಷ್ಟು ಮನಸು ಹೊಂದಿಕೊಂಡಿದೆ.
ಅಪ್ಪ ಸತ್ತು ತಿಂಗಳಾಗಿತ್ತು .ಅವರಿದ್ದಾಗಲೂ ನಾ ಪಡುವ ಕಷ್ಟ ನೋಡಿ ಮಾನಸಿಕವಾಗಿ ಕುಗ್ಗಿ ಪ್ರಾಣಬಿಟ್ಟಿದ್ದರು.
ತಾಯಿ ಪ್ರೀತಿ ಕಾಣದೆ , ಈಗ ತಂದೆಯೂ ಇಲ್ಲದೇ
ಚಿಕ್ಕಮ್ಮನ ಕೈಲಿ ಹೊಡೆಸಿಕೊಂಡಾದರೂ ಇಲ್ಲೇ ಇರುವ ಅಸಹಾಯಕಥೆ .
ಅವಳಾದರೂ ಏನು ಮಾಡಿಯಾಳು ತಂಗಿ ಲಲಿತ ವಯಸ್ಸಿಗೆ ಬಂದವಳು .
ನಾನು ಮದುವೆಯ ವಯಸ್ಸು ಮಿರುವ ಹಂತದಲ್ಲಿ ಇರುವಳು ಇಬ್ಬರು ಹೆಣ್ಣು ಮಕ್ಕಳ ಜವಾಬ್ದಾರಿ ಅವಳ ಮೇಲೆ ಇತ್ತು .
ಮೂರು ಮನೆ ಬಾಡಿಗೆ ಯಿಂದ ಜೀವನ ಸಾಗಬೇಕಾಗಿತ್ತು .
ಇಂದು ತಂಗಿಯನ್ನು ನೋಡಲು ಬಂದ ಗಂಡು ನನ್ನ
ಮೆಚ್ಚಿದ್ದ. ಹಾಗು ದೊಡ್ಡ ವಳು ತಾನೆ ಮೊದಲು ಮದುವೆ ಯಾಗಬೇಕು ಎಂದು ಚಿಕ್ಕಮ್ಮನ ಮುಖಕ್ಕೆ
ಹೊಡೆದ ರೀತಿಯಲ್ಲಿ ಮಾತಾಡಿದ್ದರು.
ಲಲಿತ ಚಿಕ್ಕವಳೇ ಆಗಿದ್ದರೂ ಅವಳಿಗೆ ಮದುವೆ ಮಾಡಿ ಕಳಿಸಿ , ನಾನು ಚಿಕ್ಕಮ್ಮನ ಸೇವೆಗೆ ಕೊನೆಯವರೆಗೂ ನಿಲ್ಲಬೇಕೆಂದು ಅವಳ ಆಸೆ .
ಆದರೆ ಇಂದು ಅವಳಿಗೆ ಅವಮಾನವಾಗಿತ್ತು .
ಹಾಗಾಗಿ ನನಗೆ ಇಂದು ಈ ಶಿಕ್ಷೆ.
**************************
ರಾತ್ರಿ ನಿದ್ದೆ ಗೆಟ್ಟ ಕಣ್ಣು ಗಳಲ್ಲೇ ಮನೆಕೆಲಸ ಮುಗಿಸಿ ನೀರು ತರಲು ಹೊಳೆಗೆ ಹೊರಟೆ.
ನೀರು ತುಂಬಿಕೊಂಡು ಹೊತ್ತು ನಾಲ್ಕು ಹೆಜ್ಜೆ ಇಟ್ಟಿರ ಬೇಕು ಅಷ್ಟೇ ..ತಲೆ ಸುತ್ತು ವಂತಾಯಿತು ..
ಕೆಳಗೆ ಬೀಳುವಷ್ಟರಲ್ಲಿ ಯಾವುದೋ ಬಲಿಷ್ಠ ಬಾಹುಗಳು ನನ್ನಹಿಡಿದಿತ್ತು .
***********************************
ಕಣ್ಣು ಬಿಟ್ಟಾಗ ನಾನು ಮೆತ್ತನೆ ಹಾಸಿಗೆಯಲ್ಲಿ ಇದ್ದೆ.
ಒಂದು ಕ್ಷಣ ಬೆಚ್ಚಿ ಎದ್ದು ಕೂತೆ .ನನ್ನ ತಡೆಯಿತು ಒಂದು ಕೈ. ಅತ್ತ ತಿರುಗಿದವಳಿಗೆ ಕಾಣಿಸಿದ್ದು
ಸುಂದರ ನಗುಮುಖದ ರಾಜಕುಮಾರ ಹೌದು
ಅಪ್ಪ ಹೇಳುತ್ತಿದ್ದ ಕಥೆಯಲ್ಲಿ ಬರುವ ರಾಜಕುಮಾರ ನಂತೆ ಇದ್ದ .
ಸುಂದರ ಕಣ್ಣು ಗಳು .ಮೂಹಕ ನಗೆ , "ಏಳಬೇಡಿ rest ತಗೋಳಿ " ಎಂಥಾ ಮೃದು ಮಾತು ..ಆ ಸ್ವರಕ್ಕೆ
ನಾ ಸೋತಿದ್ದೆ . ನನ್ನ ಕಣ್ಣಲ್ಲಿ ಸಾವಿರ ಪ್ರಶ್ನೆ , ಅವನು ಅದ ಅರಿತವನಂತೆ ತನ್ನ ಬಗ್ಗೆ ಹೇಳ ಹೊರಟ.
****"*******************************
ರಾಜ್ ಗೋಪಾಲ್ ದೊಡ್ಡ ಶ್ರೀ ಮಂತ. ಮೊದಲನೇ ಹೆರಿಗೆ ಯಲ್ಲಿ ಕಷ್ಟ ವಾಗಿ ಗಂಡು ಮಗುವನ್ನು ಇವನ ಕೈಗೆ ಇತ್ತು ಆಕೆ ಕಣ್ಣು ಮುಚ್ಚಿ ದ್ದಳು . ಹರ್ಷನನ್ನು
ತಾಯಿ ಇಲ್ಲದ ತಬ್ಬಲಿ ಎಂದು ತುಂಬಾ ಮುದ್ದಾಗಿ
ಸಾಕಿದ್ದ.
ಹರ್ಷ ತುಂಬಾ ಮುದ್ದಾದ , ಹಾಗು ತುಂಬಾ ಬುದ್ದಿವಂತ ನಾದ .
ಆದರೆ ರಾಜ್ ಗೋಪಾಲ್ ನ ಸಂತೋಷ ಆ ವಿಧಿಗೆ
ಸಹಿಸಲಾಗಲಿಲ್ಲ ವೆಂಬಂತೆ ಮತೊಂದು ಆಘಾತ ಕಾದಿತ್ತು.
ಹರ್ಷನಿಗೆ 21ವರ್ಷ ನಡೆಯುತ್ತಿದ್ದಾಗಲೇ ಅವನಿಗೆ ಹೃದಯದಲ್ಲಿ ನೋವು ಕಾಣಿಸಿತ್ತು .
ಎಲ್ಲಾ ಕಡೆ ಒಳ್ಳೆಯ ಡಾಕ್ಟರ್ ಹತ್ತಿರ ತೋರಿಸಿದರೂ ಪ್ರಯೋಜನವಾಗಲಿಲ್ಲ . ಅವನಿಗೆ ಹೃದಯ ದಲ್ಲಿ ರಂದ್ರ ವಿರುವುದಾಗಿ ಡಾಕ್ಟರ್ ತಿಳಿಸಿದ್ದರು .
ಅವನಿಗೆ ಏಕಾಂತ ವಾಗಿ ಇರುವ ಸ್ಥಳ ಒಳ್ಳೆಯ ದೆಂದು ಡಾಕ್ಟರ್ ತಿಳಿಸಿದ್ದರು .ಹಾಗಾಗಿ ಅವನು ಒಬ್ಬನೇ ಊಟಿಯಲ್ಲಿ ಇದ್ದ ಫಾರ್ಮ್ ಹೌಸ್ ನಲ್ಲಿ ಕೆಲವು ಕಾಲ ಇರಬಯಸಿ ಇಲ್ಲಿಗೆಬಂದಿದ್ದ
****************************************
ಹರ್ಷ ತನಗೆ ಕಾಯಿಲೆ ಇರುವ ವಿಷಯ ಒಂದು ಬಿಟ್ಟು ಎಲ್ಲವನ್ನೂ ಶೃತಿ ಗೆ ವಿವರಿಸಿ ಹೇಳಿದ . ಇಬ್ಬರಲ್ಲೂ ಸ್ವಲ್ಪ ಸಮಯದಲ್ಲೇ ಸ್ನೇಹ ಬೆಳೆಯಿತು .
ಶೃತಿ ಎಂದಿನಂತೆ ಇರಲಾಗಲಿಲ್ಲ ಪ್ರತೀ ದಿನ ಹರ್ಷ ನನ್ನು ಭೇಟಿ ಯಾಗುತ್ತಿದ್ದಳು .
ಹರ್ಷ ಇವಳ ಸಂಗದಲ್ಲಿ ತನ್ನ ನೋವು ಮರೆತಿದ್ದ . ಆದರೂ ಎಂದೂ ತನ್ನ ಕಾಯಿಲೆ ಬಗ್ಗೆ ಹೇಳಲು ದೈರ್ಯ ಬಂದಿರಲಿಲ್ಲ .
**************************
ಅಂದು ಎಂದಿನಂತೆ ಹರ್ಷ ನಿಗಾಗಿ ಕಾದು ಕಾದು ಅವನು ಬರುವ ಸೂಚನೆ ಕಾಣದಾದಾಗ ಅವಳೇ ಅವನ ಮನೆಯ ಕಡೆ ಹೊರಟಳು .
ಬಾಗಿಲು ತಟ್ಟಲು ಮುಂದಾದಾಗ ಅವಳಿಗೆ ಒಳಗಿನ ಇಬ್ಬರು ವ್ಯಕ್ತಿ ಗಳು ಆಡುತಿದ್ದ ಮಾತು ಕೇಳಿಸಿತು ಕಲ್ಲಿನಂತೆ ಹಾಗೆ ನಿಂತು ಬಿಟಳು .
ತನ್ನ ಪಾದಗಳು ಮನೆಯ ಕಡೆ ಹೇಗೆ ನಡೆಯಿತೋ ಅವಳಿಗೆ ಗೊತ್ತಾಗಲೇ ಇಲ್ಲ .
*************************************
ಹರ್ಷನ ಡಾಕ್ಟರ್ ಅವನನ್ನು ಪರೀಕ್ಷೆ ಮಾಡಲು ಬಂದಿದ್ದು . ಹರ್ಷನ ಮುಖದಲ್ಲಿ ಇದ್ದ ಆ ಹೊಸತನಕ್ಕೆ ಅವರು ಬೆರಗಾಗಿದ್ದರು .
ಅವರಾಡಿದ ಮಾತು ಮೂರನೆ ವ್ಯಕ್ತಿ ಕೇಳಿದ
ಅರಿವು ಅವರಿಗಾಗಲೇ ಇಲ್ಲ .
********************************
ಶೃತಿ ಬೆಳಿಗ್ಗೆ ಎಂದಿನಂತೆ ಎಲ್ಲಾ ಕೆಲಸಗಳು ಮುಗಿಸಿದಳು .ಅವಳು ಆಗಲೇ ದೃಡ ನಿರ್ದಾರಕೈಗೊಂಡಿದ್ದಳು .
ತನ್ನ ತಂಗಿಗೆ ವಿಷಯ ತಿಳಿಸಿ ಒಪ್ಪಿಸಿದಳು ಅವಳು ಅತ್ತು ಕರೆದು ಕೊನೆಗೆ ಒಪ್ಪಿಕೊಂಡಳು .
ಎಂದಿನಂತೆ
ಹರ್ಷನನ್ನು ಬೇಟಿಯಾಗಲು ಹೊರಟಳು ಅವನು
ತನಗಾಗಿ ಕಾದಿರವುದನ್ನು ನೋಡಿ ಮನ ಚೂರ್ ಎಂದಿತು .
ಓಡಿ ಹೋಗಿ ತಬ್ಬಿ ಹಿಡಿದಳು . ಒಂದು ದಿನ ನೋಡದೇ ಇರುವ ಕಾರಣ ಅವನಿಗೂ
ಆ ಹಿಡಿತ ಹಿತವೆನಿಸಿತು .
ಇಬ್ಬರ ಕಣ್ಣು ಬೆರೆತು ಸಾವಿರ ಮಾತು ಆಡಿತು . ಆದರೆ ಅವಳ ಒಂದು ಬಯಕೆ ಅವನನ್ನು ಗೊಂದಲ ಗೊಳಿಸಿತು .
**************____***********
ಶೃತಿ ತನಗೆ ಕ್ಯಾನ್ಸರ್ ಇರುವುದು ತಿಳಿಸಿ ,ತಾನು ಹೆಚ್ಚು ದಿನ ಬದುಕಲಾರೆ ಎಂದೂ ,ತಂಗಿಯಸಾಕ್ಷಿ ಮೂಲಕ ಹೇಳಿದಾಗ ಅವನು ನಂಬ ದಾದ .ಕೊನೆಯ ಆಸೆ ಎಂಬಂತೆ ತನಗೆ ತಾಳಿ
ಕಟ್ಟಿ ಹೆಂಡತಿಯ ಪಟ್ಟಕೊಡುವಂತೆ ಬೇಡಿದಳು
ಅದರಂತೆ ಯಾರಿಗೂ ತಿಳಿಸದೇ ದೇವಾಲದಲ್ಲಿ ತಂಗಿಯ , ದೇವರ ಸಾಕ್ಷಿಯಾಗಿ ಮದುವೆ ನಡೆಯಿತು . ಆಮೇಲೆ ದೊಡ್ಡವರಿಗೆ ತಿಳಿಸುವ ಜವಾಬ್ದಾರಿ ತಂಗಿ ಗೆ ಒಹಿಸ ಲಾಯಿತು .
*******************************
ಎಲ್ಲರ ಮುಖದಲ್ಲಿ ಸಂತಸ ಬೆರೆತ ನೋವು ಇತ್ತು.
ಚಿಕ್ಕಮ್ಮ ನ ಮುಖದಲ್ಲಿ ಪಶ್ಚಾತ್ತಾಪ ಎದ್ದು ಕಾಣುತಿತ್ತು
ಎಲ್ಲರೂ ಊಟ ಮಾಡಿ ಗಂಡು ಹೆಣ್ಣನ್ನು ಬಿಟ್ಟು ಹೊರಟರು .
ಶೃತಿ ನೆಮ್ಮದಿಯಿಂದ ಹರ್ಷ ನ ಎದೆಗೊರಗಿದಳು ಎರಡೂ ಹೃದಯ ಗಳು ಒಂದಾಯಿತು.
ಆದರೆ ( ನಿಜವಾಗಿ ಶೃತಿ ಗೆ ಯಾವ ಕಾಯಿಲೆ ಯೂ ಇರಲಿಲ್ಲ. ಅದು ಅವನಿಗೆ ಹೇಳಲೂ ಇಲ್ಲ )
ಸುರಭಿ ಲತಾ