ಮುಕುಂದ ಮಾಧವ ಎಂದು
ಕೂಗುತ ಬಳಿ ಬಂದೆ
ಆಲಿಸದೆ ಏಕೆ ಮರೆಯಾಗಿ
ದೂರಕೆ ಹೋದೆ
ಅಗ್ನಿಯಲಿ ಬಿದ್ದ ಹುಳುವಂತಾದೆ ಇಲ್ಲಿ
ಬೇಗೆಯಲಿ ಬೇಯುತಲಿದೆ ನನ್ನೊಡಲು
ಕಂಡು ಕಾಣದಂತೆ ಕುಳಿತಿಹೆ ಅಲ್ಲಿ
ಮಿಡುಕಾಡದೆ ಹೋಯಿತೆ ನಿನ್ನ ಕರುಳು
ಕೂತಲ್ಲಿ ಕೂರಲಾಗದೆ ಬೇಡಿದೆ
ಅಂದು ಇಂದು ನಿನ್ನನೇ ನಂಬಿದೆ
ಅರಿಯದವನು ನೀನೇನಲ್ಲ
ಒಲಿಸುವ ಬಗೆಯ ಅರಿಯದಾದೆನಲ್ಲ
ತಪ್ಪು ಒಪ್ಪುಗಳು ನಿನ್ನ ಪಾದ ಸೇರಲಿ
ನಿನ್ನ ಕರುಣೆಯ ನೋಟ ನನ್ನ ಮೇಲಿರಲಿ
ಅಣು ಅಣುವು ಕಾಣಲು ಬಯಸಿದೆ
ಬಳಿ ಬರಬಾರದೆ ಕಾದಿಹಳು ಈ ರಾಧೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ