ಸೋಮವಾರ, ಜೂನ್ 21, 2021

 ಬದುಕಲಿ ನುಸುಳಿ ಬಂತು ಮಹಾ ಮಾರಿ 

ತೂರಿ ನಿಂತಿತು ಒಡಲೊಳಗೆ ಜೀವ ಹೀರಿ ಸರಮಾಲೆ ಹೊತ್ತು ಸಾಗಿತು ಗಾಡಿ 

ಬೇಡಲು ಆಗದೆ ದೇವನ, ಮುಚ್ಚಿದರು ಗುಡಿ 


ಸಾಲು ಸಾಲು ಮಾರಣ ಹೋಮದ ಧೋಮ 

ಅರಿಯದಾದೆ ಭಗವಂತನ ಕೋಪದ ಮರ್ಮ

ದುಡಿಯುವ ದಾರಿ ಕಾಣದೆ,ಹಸಿವಿನ ಬಾಧೆ ತಾಳದೆ,ಕಣ್ಣೀರ ಕೂಪದಲಿ,ಏನೆಂದು ಬಣ್ಣಿಸಲಿ 


ಮರುಗಿತು ಹಲವು ಜೀವ,ಧಾನಿಗಳು ಅರಿತರು ನೋವ, ನಿಂತರು ದೇವರಂತೆ,ಕರುಣೆಯ ಮೂರುತಿಯಂತೆ,ಒಂದಾಗಲು ಒಗ್ಗಟ್ಟಿನಲಿ 

ಕಷ್ಟ ಗಳು ಸರಿವವು ಮರೆಯಲಿ 


ಹಗಲೆನ್ನದೆ,ಇರುಳೆನ್ನದೆ ನಿಂತರು ಅರಳಿ ಮರದಂತೆ,ಕಾಯ್ದರು ಒಡ ಹುಟ್ಟಿದವರಂತೆ  

ಮರು ಕಳಿಸದಿರಲಿ ರೋಗ ರುಜಿನಗಳು 

ಒಂದಾಗಿ ಬೆರೆತು ಕರೆವ ಒಳ್ಳೆಯ ದಿನಗಳು 


ಸುರಭಿ ಲತಾ  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...