ಗುರುವಾರ, ಜೂನ್ 17, 2021

ಮುನಿಸು ನೋಯಿಸಿತು ಮನಸು

 ಸರಸ ವಿರಸ 


ಮುಂಜಾನೆ ಇಂದ ಕಾದು ಕೂತಿದ್ದೆ 

ಮುಸ್ಸಂಜೆಗೆ ಬಂದವನು 

ಬಾಯಿತುಂಬಾ ಬೈದಿದ್ದೆ 

ನಾ ಸಿಗದೇ ಹೋಗಿದ್ದಕ್ಕೆ ಕೂಪಗೊಂಡಿದ್ದೆ

ಒಂದೂ ಮಾತಾಡದೆ ಸುಮ್ಮನಿದ್ದು ಬಿಟ್ಟೆ 


ಮುನಿಸು ಬರದೇ ಹೋಯಿತು 

ನೀ ಅಂದಾಗಲೂ , ನನ್ನೊಲವು 

ನಿನ್ನೋಳಗಿತ್ತು 

ಆಡಿ ಮುಗಿಸಿ ಕಣ್ಣ ನೋಡದೇ 

ಕಣ್ಮರೆಯಾದೆ 


ನೀ ಕೊಂದಿದ್ದರೂ ಚನ್ನವಿರುತಿತ್ತೆನೂ 

ಚೆನ್ನ , ನೀ ಹೋದೆಯಲ್ಲಾ 

ಆಗಲೇ ನೋಡು ತುಂಬಿತ್ತು ನನ್ನ  ಕಣ್ಣು

ಎದೆಯಲ್ಲಿ ಆಯಿತು ಹುಣ್ಣು 


ಬರದೇ ಹೋಗುವೆಯೇನೂ ಎಂದುಕೊಂಡೆ 

ಕೊನೆಗೂ ಹೊಡೆಯಿತು ಕರೆ ಗಂಟೆ 

ಎದುರಲ್ಲಿ ನಿಂತ ನೀನು 

ಬೇಕಿರಲಿಲ್ಲವೇನೂ ಮಾತಿನ್ನು

ತಬ್ಬಿ ಹಿಡಿದೆ ನೀನು 

ನಿನ್ನಲ್ಲಿ ಕರಗಿ ಹೋದೆ ನಾನು 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...