ಮಂಗಳವಾರ, ಜೂನ್ 8, 2021

ತೊರೆದು ಹೋದೆಯ

 ಸುಮ್ಮನಿದ್ದವಳನ್ನು ಕೆಣಕಿ ಮನವ ಕೆದಕೆ ಬೇಡಿದೆ ಪರಿ ಪರಿಯಲಿ ಒಲವನು 

ಮೌನ ಮರೆತು ಎದೆಯಲಿ ಪ್ರೀತಿಯ ಪುಷ್ಪ ಅರಳುವ ಹೊತ್ತಿಗೆ ನನ್ನ ತೊರೆದೆ ಏನು 


ಕೋರಿದೊಡನೆ ದೇವನು ಒರವ ಕೊಡನು 

ಕಂಡ ತಕ್ಷಣ ಕಣ್ಣು ಬೆರೆಸಲಾಗುವುದೇನು 

ಕೊಳಕು ತುಂಬಿದ ಜಗವಿದು 

ನಂಬಿಕೆ ಎಂಬುದು ಮರೀಚಿಕೆ 


ಮೋಹವದು ಕಾಮನ ಬಿಲ್ಲಿನಂತಹುದು 

ಕಾಣಲೇನೊ ಹಲವು ಬಣ್ಣಗಳು 

ಕಾಮ ವೇನೊ ಕ್ಷಣಿಕವಂತದ್ದು 

ಹೇಗೆ ಅರಿಯಲೊ ಗೆಳೆಯ 


ಬಂದು ಒಮ್ಮೆ ಸತ್ಯದ ಅರಿವಾಗಿಸು 

ನಿತ್ಯ ಭೋಜನ ವಲ್ಲದೆ ಹಬ್ಬದೂಟವ ಉಣಿಸು 

ಹಗಲಲಿ ನಕ್ಷತ್ರ ವ ತೋರದೆ 

ಇರುಳಿನ ಚೆಂದ್ರಮನಂತೆ ಬಾ ಬೆಳಗು 


ಸುರಭಿ ಲತಾ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...