ಮನದ ಮಾತು ಬರೆಯುತ
ಹೊರಟಿರುವೆ
ವ್ಯಾಕರಣ ಪದ ನಾ ಅರಿಯೇ
ಭಾವನೆ ಗಳನ್ನು ಹಾಳೆಯಲಿ
ಮುದ್ರಿಸಿ ಬಿಡುವೆ
ಉಚ್ಛಾರಣೆಯ ರೀತಿ ನಾ ಅರಿಯೇ
ಹಾದಿಯಲ್ಲಿ ನಡೆದು ಹೊರಟಿರುವೆ
ಗುರಿ, ಹಾಗು ಕಾರಣವ ನಾ ಅರಿಯೆ
ಕೋಪಗೊಂಡರೆ ಕ್ಷಮಿಸಿಬಿಡಿ ಎನ್ನ
ತಪ್ಪೇನೆಂದು ನಾ ಅರಿಯೆ
ಪದಗಳ ಚಲನೆಯ ತಡೆಹಿಡಿಯದಿರಿ
ನೀವು , ಅದರಲ್ಲಿನ ನಾ ಕಂಡ ಸಂತಸ
ಬೆರೆಲ್ಲಿದೆ ಎಂಬುದ ನಾ ಅರಿಯೆ
ಓದಲು ಇಚ್ಛೆ ಇಲ್ಲದವರು
ಕಡೆಗಣಿಸದಿರಿ ನನ್ನ
ಒಲಿಸುವುದ ನಾ ಅರಿಯೆ
ನೀವು ಇಲ್ಲಿಂದಲೇ ಅರಿಯುವಿರಿ
ಎಂಬ ಭಾವನೆ, ಬೇರೆ ವಿಳಾಸವ
ನಾ ಅರಿಯೆ
ನಿಮ್ಮ ಪ್ರೋತ್ಸಾಹ ವಿಲ್ಲದಿರೆ
ಬರೆದು ಪ್ರಯೋಜನ ವೇನೆಂಬುದ
ನಾಅರಿಯೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ