ತುಂಟಿ
ತಲೆ ನೀರು ಹಾಕಿಕೊಂಡು ಅಮ್ಮ ಕೊಟ್ಟ ಬಿಸಿ ಹಾಲು ಕುಡಿದು ಆಗ ತಾನೆ ಮಲಗಿದ್ದೆ .
ಪಾಪು ಸಹನಾ ಅವಳಿಗೂ ಅಮ್ಮ ಸ್ನಾನ ಮಾಡಿಸಿ ಮಲಗಿಸಿದ್ದರು.
ಎಳೆ ಬಾಣಂತಿ ತಲೆಗೆ ಸ್ನಾನ ಮಾಡಿ ಮಲಗಬಾರದು ದಪ್ಪ ಆಕ್ತಾರೆ ಅಂತ ಹೇಳುತ್ತಲೇ ಇದ್ದರು ನಾನು ರವಿ ಬೆಳಗೆರೆಯವರ ಒಂದು ಕಾದಂಬರಿ ಓದುತ್ತಾ ಹಾಗೆ ಕಣ್ಣು ಮುಚ್ಚಿದ್ದೆ.
ನನ್ನ ಅಕ್ಕ ಶಾಲಿನಿ ಆಫೀಸ್ ಗೆ ಹೋಗುವಾಗ ಮಗುವನ್ನು ಅಮ್ಮನ ಬಳಿ ಬಿಟ್ಟು ಹೋಗುತ್ತಿದ್ದಳು ಅದು ಮೂರು ವರ್ಷದ ಮಗು ( ಸುಷ್ಮಾ)
ಸಹನಾ ಮಲಗಿದ ಮೇಲೆ ನಾನೇ ಸುಷ್ಮಳನ್ನು ನೋಡಿಕೊಳ್ಳುತ್ತಿದ್ದೆ.
ಅಂದು ತಲೆಗೆ ನೀರು ಹಾಕಿ ಕೊಂಡಿದ್ದರಿಂದ ಮತ್ತು ಸಾಂಭ್ರಾಣಿ ಹಾಕಿ ಸ್ಟೀಮ್ ಕೊಟ್ಟಿದ್ದರು ಹಾಗಾಗಿ ನಿದ್ದೆ.
ಸುಷ್ಮಾ ಆಟವಾಡುತ್ತಿದ್ದಳು ಸರಿ ಆಡಲಿ ಅಂತ ನಾನು ಹಾಗೆ ಮಲಗಿದೆ.
ಅಮ್ಮ ಮನೆ ಕೆಲಸದಲ್ಲಿ ತೊಡಗಿದ್ದರು.
ಯಾರೋ ಕರೆದಂತೆ ಆಯಿತು ನಿದ್ದೆ ಕಣ್ಣು ಏನು ಅಂತ ಅರೆ ಬರೆ ಕಣ್ಣು ತೆಗೆದು ನೋಡಿದೆ.
ನಾನು " ಏನಾಯಿತಮ್ಮ " ಅಂದೆ
ಅಮ್ಮ ನನಗೆ ಬೈಯ್ತಿದ್ದರು " ತಲೆಗೆ ನೀರು ಹಾಕ್ಕೊಂಡು ಮಲಗಬಾರದು ಅಂತ ಎಷ್ಟು ಸಾರಿ ಹೇಳೋದು ನಿಂಗೆ . ನೋಡು ನಿನ್ನ ಮಗುಗೆ ಏನು ಗತಿ ಮಾಡಿದಳೆ ಈ ಸುಷ್ಮಾ" ಅಂದರು
ನನಗೆ ಗಾಬರಿ ಯಾಗಿ ತಟಕ್ಕನೆ ಎದ್ದೆ . ಪಕ್ಕದಲ್ಲಿ ಯಾವುದೋ ಪುಟ್ಟ ಭೂತ ಮಲಗಿತ್ತು.
ಪೂರ್ತಿ ಕಣ್ಣು ಉಜ್ಜಿ ನೋಡಿದೆ. ಸುಷ್ಮಾ ಪಾಪ ಅದು ಮಗುವೆ
ಆಟವಾಡುತ್ತಾ ಮಗುವಿಗೆ ಹಣೆಗೆ ಇಡುವ ಕಾಡಿಗೆ ಕಪ್ಪು ಡಬ್ಬಿ ತೆಗೆದು ತನ್ನ ಎರಡು ಪುಟ್ಟ ಕೈಗಳಿಗೂ ಚೆನ್ನಾಗಿ ಬಳೆದು ಕೊಂಡು
ನನ್ನ ಪಕ್ಕದಲ್ಲಿ ಮಲಗಿದ್ದ ಪುಟ್ಟ ಮಗು ಸಹನಾ ಮೃ ಕೈ ಮುಖಕ್ಕೆ ಚೆನ್ನಾಗಿ ಬಳೆದಿದ್ದಳು ಎಷ್ಟು ಅಂದರೆ ಬೆಳ್ಳಗೆ ಇರುವ ಮಗು ಒಂದೇ ಒಂದು ಇಂಚು ಸಹ ಬಿಡದೇ ಡಬ್ಬಿಯಲ್ಲಿ ಇರುವ ಕಾಡಿಕೆ ಅಷ್ಟೂ ಬಳೆದಿದ್ದಳು.
ಆಗ ತಾನೆ ಸ್ನಾನ ಮಾಡಿಸಿ ಮಲಗಿಸಿದ್ದ ಮಗುವಿಗೆ ಹೀಗೆ ಬಳೆದಿದ್ದಾಳೆ ಅಂತ ಅಮ್ಮ ನನ್ನ ಬೈತಿದ್ದರು.
ನನಗಂತೂ ನಗು ತಡೆಯೋಕೆ ಆಗದೆ ನಕ್ಕು ನಕ್ಕು ಸಾಕಾಯಿತು.
ಅಮ್ಮ ನನ್ನ ಭೈತಿದ್ದರೆ ಪುಟ್ಟ ಸುಷ್ಮಾ ಒಮ್ಮೆ ನನ್ನ ಒಮ್ಮೆ ಅಜ್ಜಿಯನ್ನು ಪಿಳಿ ಪಿಳಿ ಅಂತ ನೋಡುತ್ತಿತ್ತು .
ನಾನು ಹೋಗಿ ಅವಳನ್ನು ಎತ್ತು ಕೊಂಡು ಮುದ್ದಾಡಿದೆ. ಅಮ್ಮ ಮತ್ತೆ ಸಹನಾ ಳಿಗೆ ಸ್ನಾನ ಮಾಡಿಸಲು ಹೋದರು.
ಸಹನಾ ಸುಷ್ಮಾ ಜೊತೆ ಜೊತೆ ಬೇಳೆದು ಬಂದವರು ಆ ಪ್ರೀತಿ ವಾತ್ಸಲ್ಯ ಈಗಲೂ ಅವರ ನಡುವೆ ಹಾಗೇ ಇದೆ. ಮುಂದೆಯೂ ಹಾಗೇ ಇರಲಿ ಎಂಬುದು ನನ್ನ ಆಸೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ