ಸೋಮವಾರ, ಜೂನ್ 28, 2021

 ಜಾತಿ ಜಾತಿ ಎಂಬರೇಕೆ 

ಮೂಡ ಜನಗಳು 

ಜನಾರ್ಧನನ   ಭಯವಿಲ್ಲದ 

ನಾಸ್ತಿಕರು 


ಉಸಿರಾಡಲು ಬೇಕು ಗಾಳಿ 

ಅದರಲ್ಲಿಯೂ ಕಾಣ್ವರೇ ಜಾತಿಯು 

ಉತ್ತಮ ವಲ್ಲದು ಇವರ ರೀತಿಯು 

ಇವರಿಗೆ ಹೇಳ್ವರು ಯಾರು ನೀತಿಯು 


ಕೂಡಿಟ್ಟ ಹಣವಿಹುದು ಸಹಜ 

ಕೊನೆಗಾಲದಲ್ಲಿ ಬರದು ಮನುಜ 

ಮಾಡಿದಪಾಪ ಕಾಡುವುದು ಒಂದು ದಿನ

ಪುಣ್ಯ ಒಂದೇ ಸಲಹುದು ನಿನ್ನ 


ದಾನ,ಧರ್ಮ ಮಾಡದವನು 

ಮೇಳು,ಕೀಳೆಂದು ಭಾವಿಸುವವನು 

ಕಡೆಗೊಂದು ದಿನ ಕಂಡಾನು 

ಭೂಲೋಕದಲ್ಲೇ ನರಕವನ್ನು 


ಬದಲಿಸಿಕೋ ಕೊಳಕು ಯೋಚನೆ 

ಮಾಡು ನೀ ಆತ್ಮಸಾಧನೆ 

ಅನ್ಯರಲ್ಲಿ ತೋರು ಕರುಣೆ 

ನಿನಗೆ ಸಿಗುವುದು ಮನ್ನಣೆ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...