ಬುಧವಾರ, ಜೂನ್ 9, 2021

ಅರಿವು

 ಮರೆತು ಹೋಗಬಹುದೇ ಆ ಮಧುರ ಕ್ಷಣವನು

ಸುತ್ತ ಮುತ್ತಲು ಕಗ್ಗತ್ತು ಆವರಿಸಿ 

ರೋಗವಿದು ಸಾಮ್ರಾಜ್ಯ ವಾಳಿರಲು 

ಜಗದ ಜಂಜಾಟದಲಿ ದಿನವು ನೂಕಿರಲು 

ಇನಿಯ ಮರೆವು ತಬ್ಬಿತೇಕೆ ನನ್ನನ್ನು 


ಸದಾ ನಗಿಸಿ ಸಂತಸ ಕೊಡುವ ಮನಸು 

ಹೆಸರ ನೆನೆದೊಡನೆ ಕನಸಿನಲಿ ಬರುವ

ಮನಸದು ಮಲ್ಲಿಗೆಯ ಮಾಲೆ ಎಂತಹದು 

ಮುಂದಾಗಿ ಶುಭ ಕೋರುವ ಬಯಕೆ ಇರಲು 

ಇನಿಯ ಮರೆವು ತಬ್ಬಿತೇಕೆ ನನ್ನನು 


ಕಸೂತಿ ಮಾಡಿದ ಕುಸುಮ ಮಾಲೆಯ 

ಕೊರಳಿಗೆ ತೊಡಿಸುವ ಸಮಯದು 

ಮುಗುಳು ನಗೆಯ ಮುತ್ತ ಸುರಿಸಿ 

ಸಿಹಿಯ ಸವಿಯುವ ಸಂತಸ ದಿನವದು 

ಇನಿಯ ಮರೆವು ತಬ್ಬಿತೇಕೆ ನನ್ನನು 


ಕ್ಷಮೆಯ ಬೇಡಲು ಮುದುರಿದ ಮನಸಿನೊಳು 

ಕಹಿಯ ಉಂಡಂತೆ ನಿರಾಸೆಯು ತಬ್ಬಿತೆನ್ನನು 

ಸಂತೈಸೆ ನಿನ್ನನು ನನಗರಿವಿರದ ತಪ್ಪನ್ನು 

ಮರೆತು ನಗುವ ಸೂಸಿಬಿಡು ಸ್ನೇಹಿತನೆ

ನಿನಗೆಂದೆ ಬರೆದ ಎದೆಯ ಪದಗಳಿವು 


ಮಂದಾರ ಪುಷ್ಪದ ತೇರ ಎಳೆವೆ ನೆಂದು 

ಮರೆತು ಬೆರೆತು ಸಾಗುವ ಮುಂದಿನ ದಿನವದು 


ಸುರಭಿ ಲತಾ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...