ಸೋಮವಾರ, ಜೂನ್ 7, 2021

ಮನವಿ

 ನಿಮ್ಮ ನಿಮ್ಮ ಘನತೆ ಗಳ ಉಳಿಸಿಕೊಳ್ಳಿ 

ಅದಕ್ಕೆ ಮುಂಚೆ ಜನಗಳ ನೋವು ಒಮ್ಮೆ ಕೇಳಿ

 

ಹಿಂದು,ಕ್ರೈಸ್ತ, ಮುಸಲ್ಮಾನ, ನಿಮ್ಮ ಮಂದಿರಗಳನ್ನ ಉಳಿಸಿ ಕೊಳ್ಳಿ 

ಅದಕ್ಕೆ ಮುನ್ನ ಧರೆಗೆ ಉರುಳುತಿಹ ಬಡವರ ಗುಡಿಸಲ ಉಳಿಸಿ 


ಕೈ ಆಗಸದೆತ್ತರ ಚಾಚಿ ಕಾಣದಿಹ ದೇವರ ಕರೆಯಿರಿ ಬೇಡ ಎಂದವರಾರು 

ಬಡವರ ಹಸಿವಿನಿಂದ ಚಾಚಿದ ಕೈಯ್ಯನೊಮ್ಮೆ 

ತುತ್ತಿನಿಂದ  ತುಂಬಿ 


ಅಂದು ಸತ್ತ ಹೆಣಗಳ ಮೇಲೆ ರಾಶಿ ರಾಶಿ ಹೂವ ಸುರಿದಿರಿ,ಮೆರವಣಿಗೆ ಮಾಡಿದಿರಿ 

ಇಂದು ರೋಗದಿ ನರಳಿ ಜೀವ ಉಳಿಸೆಂದು ಬೇಡಲು,ಹಾಸಿಗೆ ,ಸ್ಥಳ ವಿಲ್ಲ ವೆನ್ನುವಿರಿ 


ಸಾವಿರ ಮಂದಿ ಜನರ ನಡುವೆ ದರ್ಪದಿ ಮೆರೆದವರೆಲ್ಲರೂ 

ಉಸಿರು ನಿಂತಾಗ ನಾಲ್ಕು ಜನ ದೇಹವನ್ನು ಹೊರಲು ಹಿಂದೆಗೆಯುತಿಹರು 


ಇಷ್ಟಾದರೂ ಮೇಲು,ಗೀಳು ಜಾತಿ ಮತದ ಅಹಂಕಾರ ಅಡಗಿಲ್ಲ 

ಇನ್ನೂ ಎಂತಹ ಕಠಿಣ ಪರಿಸ್ಥಿತಿ ಶಾಪವಾಗಿ ಕೊಡಬೇಕೊ ಆ ದೇವನೇ ಬಲ್ಲ 


ಸುರಭಿ ಲತಾ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...