ಹೋಗುವುದಾದರೆ ಹೋಗಿ ಬಿಡು
ಬಂದು ನನ್ನ ಕಾಡದಿರು
ಮನಸ್ಸಿನಲ್ಲಿ ಹೊಸ ಆಸೆ ಬಿತ್ತಿ
ನನ್ನನೇಕೆ ಸುಡುತಿ
ಹೋಗುವುದಾದರೆ ಹೋಗಿ ಬಿಡು
ಬಂದು ನನ್ನ ಕಾಡದಿರು
ಕಾಡಿ ಬೇಡಿ ಕರವ ಮುಗಿದು
ಕಲ್ಪನೆಯಲ್ಲೇ ಕರಗಿಸಿದೆ
ನಡೆಯದನ್ನು ನಡೆಸು ಎಂದು
ಕೇಳಲು ಮೂಕಿಯಾದೆ ಇಂದು
ಜಗವ ಎದುರು ಜಾತಿ ಮುಂದು
ಹೋಗಲಾಡಿಸಲು ಬರುವರಾರು ಇಂದು
ಆಡುವರು ಸಾವಿರ ಮಾತು ಹಿಂದೆ
ಪಾಲಿಸುವರು ಮಾತ್ರ ಕೆಲವೇ ಮಂದಿ
ನೀನು ಮೇಲು ನಾನು ಕೀಳು
ಎಂಬ ಬೇಡ ಬೇದ
ಒಲವು ಮೂಡಲು ಏನು ಬರದು
ನಮ್ಮಿಬ್ಬರ ಮುಂದ
ಹೆದರಿ ಸರಿದು ಹೋಗವುದಾದರೆ
ಹೋಗಿ ಬಿಡು ಇಲ್ಲ
ಗೆಲ್ಲುವುದಾದರೆ ಗೆದ್ದು ಬಿಡು
ಅಂಜಿಕೆಯನ್ನು ತೊರೆದು ಬಿಡು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ