ಶುಕ್ರವಾರ, ಜೂನ್ 11, 2021

ಸಣ್ಣ ಕಥೆ

 ಋಣಾನು ಬಂದ 

.................


ಸುಹಾಸ್ ಪೀ ಯೂ ಸಿ ಮುಗಿಸಿ ಡಿಗ್ರೀ ಮೊದಲ್ನೇ ವರ್ಷ ಹೊಸ ಕಾಲೇಜಿಗೆ ಹೊರಟಿದ್ದ . ಮೊದಲಿಂದಲೂ ತಂದೆಗೆ ಮುದ್ದು .


ತಾಯಿ ಇಲ್ಲವೆಂದು ಅವನು ಕೇಳಿದ್ದೆಲ್ಲ ಕೊಡಿಸುತಿದ್ದ .ತಂದೆಗೆ ನಿರಾಸೆ ಆಗದಂತೆ ಅವನು ಮೊದಲಿಂದಲೂ ಓದಿನಲ್ಲಿ ಯಾವಾಗಲು ಮುಂದೆ ಇದ್ದ .


ಸುಹಾಸ್ ಕಾಲೇಜ್ ನಲ್ಲಿ ಒಳ್ಳೆ ಹೆಸರು ಮಾಡಿದ್ದ . collage  ಶುರುವಾಗಿ ೧೫ ದಿನಗಳು ಕಳೆದಿತ್ತು ,ಆಗ ಹೊಸ ಹುಡುಗಿ ಬಂದು ಸೇರಿದ್ದಳು . ಮೊದಲನೇ ದಿನವೇ ಸುಹಾಸ್ ಗೆ ಅವಳು ಇಷ್ಟವಾಗಿದ್ದಳು .


ಓದಿನಲ್ಲಿ ಅವಳು ತುಂಬ ಜಾಣೆ ಯಾಗಿದ್ದಳು .ಆದರೆ ಅವಳು ಬಂದಾಗಿನಿಂದ ಯಾರ ಬಳಿಯಲ್ಲೂ ಮಾತಾಡುತ್ತಿರಲಿಲ್ಲ . ಅವಳ ಗೆಳತಿಯ ಜೊತೆಯಲ್ಲಿ ಇದ್ದು ಕಾಲೇಜು ಮುಗಿದಾಕ್ಷಣ ಕಾರಿನಲ್ಲಿ ಹೊರಟು ಹೋಗುತ್ತಿದ್ದಳು .


Exam     ಚನ್ನಾಗಿ ಮಾಡಿದ್ದೀರಾ ಕೇಳಿದ ಇಂಪಾದ ಸ್ವರಕ್ಕೆ ಅವನು  ಉತ್ತರಿಸಿದ್ದ .ಅವಳ ಹೆಸರು ಮಾನಸ ಎಂದು ತಿಳಿಯಿತು  .ತನ್ನ ತಾಯಿಗೆ ಒಬ್ಬಳೇ ಮಗಳು .ಅವಳಿಗೂ ತಂದೆ ಇರಲಿಲ್ಲ .ತಾಯಿ ಟೀಚರ್ ಆಗಿ ಕೆಲಸ ಮಾಡಿ ಮಗಳನ್ನು ಓದಿ ಸುತ್ತಿದ್ದ  ಳು .


ಆದರೆ ಅವಳಿಗೆ ಕಣ್ಣು ಕಾಣುತ್ತಿರಲಿಲ್ಲ . ಹಾಗಾಗಿ ಅವಳು ತನ್ನ ಗೆಳತಿ ತನುಜ ಯಾವಾಗಲು ಅವಳ ಜೊತೆಯಲ್ಲೇ ಇರುತ್ತಿದ್ದಳು .

ಇಬ್ಬರು ಅಂದಿನಿಂದ ಒಳ್ಳೆಯ ಗೆಳೆಯರಾದರು .


ಪ್ರತಿದಿನ ಒಟ್ಟಿಗೆ ಕಾಲೇಜಿಗೆ ಬರುತ್ತಿದ್ದರು    . ಇವರ ವಿಷಯ 

ಸುಹಾಸ್ ತಂದೆ ಮೋಹನ್ಗೂ ಗೊತ್ತಿತ್ತು .ತನುಜಳ ತಾಯಿ ಕವಿತಾಗೂ ಗೊತ್ತಿತ್ತು .


ಒಂದು ದಿನ  ಸುಹಾಸ್ ಮಾನಸಳನ್ನು ಮನೆಗೆ ಕರೆದುಕೊಂಡು ಬಂದು   ಪರಿಚಯಿಸಿದ್ದ .

ಅವನಿಗೂ ಅವಳು ಕಣ್ಣಿಲ್ಲದ ವಿಷಯ ನೋವು ಕೊಟ್ಟಿತ್ತು .


ಮಾನಸ  ಮಾರನೆಯ ದಿನ ಹುಟ್ಟುಹಬ್ಬ ಇದ್ದದ್ದರಿಂದ ಸುಹಾಸ್ ಹಾಗು ಮೋಹನ್ ಇಬ್ಬರನ್ನು ತನ್ನ ಮನೆಗೆ ಇನ್ವೈಟ್ ಮಾಡಲು ಬಂದಿದ್ದಳು .


ಅಂದು ಬೆಳಿಗ್ಗೆ ಮಗಳ ಹುಟ್ಟು ಹಬ್ಬವೆಂದು ಹಬ್ಬದ ಅಡುಕೆ ತಯಾರಿಸಿ ಸುಹಾಸ್ ಹಾಗು ಅವನ ತಂದೆ ಗಾಗಿ ಕಾಯುತ್ತಿದ್ದರು .


ಹನ್ನೆರಡು ಗಂಟೆಗೆ ಸುಹಾಸ್ ಹಾಗು ಮೋಹನ್ ಇಬ್ಬರು ಮಾನಸ ಮನೆಗೆ ಬಂದರು . ಕಾಲಿಂಗ್ ಬೆಲ್ ಒತ್ತಿದೊಡನೆ ಮಾನಸಳೇ  ಬಂದು ಬಾಗಿಲು ತೆಗೆದಳು .


 ಅಮ್ಮ ಸುಹಾಸ್ ಬಂದಿದ್ದಾರೆ      ಬಾ ಎಂದು ಅಲ್ಲಿಂದಲೇ ಕೂಗಿ ಕರೆದಳು ." ಬಂದೆ ಎನ್ನುತ್ತಾ    ಹೊರ ಬಂದ ಕವಿತಾ ..

ಮೋಹನ್ ನನ್ನು ನೋಡುತ್ತಾ ನಿಂತಳು  .ತನ್ನ ಕಣ್ಣನ್ನು ತಾನೆ ನಂಬದಾದಳು .


ಹಳೆಯ ನೆನಪು ಅವಳಲ್ಲಿ ತೇಲಿಬಂತು ಮೋಹನ್ ಹಾಗು ಕವಿತಾ ಒಬ್ಬರೊನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ .ಅವರಿಬ್ಬರೂ ಮದುವೆ  ಆಗಬೇಕೆಂದು ಅಂದುಕೊಂಡಿದ್ದರೂ . ದೊಡ್ಡವರ ಒಪ್ಪಿಗೆ ಇಲ್ಲದೆ ಅವರ ಮನಸ್ಸು ನೋಯಿಸದೆ ಇಬ್ಬರು ಬೆರಾಗಿದ್ದರು .ಈಗ ವಿಧಿ   ಅವರನ್ನು ಮಕ್ಕಳ ಮೂಲಕ ಇಲ್ಲಿ ಸೇರಿಸಿತ್ತು .


ಈ ವಿಷಯ ತಿಳಿದು ಸುಹಾಸ್ ಹಾಗು ಮಾನಸಗೂ ಸಂತಸ ವಾಗಿತ್ತು. 


Exam    ಮುಗಿದು ರಜೆ ಬಂದಿತ್ತು .ಮಗಳ ಮಾತಿನಂತೆ ಕವಿತಾ ಒಳ್ಳೆಯ ಸೀರೆ ಉಟ್ಟು ರೆಡಿ ಯಾದಳು


 ,ಮಗಳು ಅಂದು ಹೊಸ ಸುದ್ದಿ ಹೇಳುವುದಾಗಿ ಅದು ದೇವಸ್ತಾನದಲ್ಲಿ ಎಂದು ಹೇಳಿದ್ದಳು . 


ಮಗಳು ಸುಹಾಸ್ ಅನ್ನು ಇಷ್ಟ ಪಡುತ್ತಿದ್ದ ವಿಷಯ ತಿಳಿದಿತ್ತು , ಅದರೂ ಏನೂ ತಿಲಿಯದವಳಂತೆ ಸುಮ್ಮನಿದ್ದಳು .


ಅವಳೇ ಹೇಳಲಿ ಎಂದು ಕಾದಿದ್ದಳು .ಇಂದು ಆ ಸಮಯ ಬಂದಿತ್ತು .ದೇವಸ್ತಾನಕ್ಕೆ ತಾಯಿ ಮಗಳು ಹೋಗುವಸ್ಟರಲ್ಲಿ  ಅಲ್ಲಿ ಸುಹಾಸ್ ಹಾಗು ಕೆಲ ಮುಕ್ಯ ಸ್ನೇಹಿತರು ಅಲ್ಲಿ ಬಂದು ಕಾದಿದ್ದರು .


ಅಂದು ಸುಹಾಸ್ ರೇಶಿಮೆ ಪಂಚೆ ಯಲ್ಲಿ ಲಕ್ಷಣವಾಗಿ ಕಂಡಿದ್ದ ಕವಿತಾಗೆ .ಹಾಗೆ ಮೋಹನ್ ಸಹ ಚನ್ನಾಗಿ ಕಾಣುತಿದ್ದ . 


ಎಲ್ಲರೂ ದೇವಸ್ತಾನದಲ್ಲಿ ಪೂಜೆ ಮಾಡಿಸಲು ಒಟ್ಟಾಗಿ ನಿಂತರು . ಪುರೋಹಿತರು ದೇವರಿಗೆ ಅರ್ಚನೆ  ಮಾಡಿ ಅಲ್ಲಿ ತೆಗೆದಿಟ್ಟ ಎರಡು ಹೂವಿನ ಹಾರಗಳು ತಂದು ಸುಹಾಸ್ ಕೈತಲ್ಲಿ ಕೊಟ್ಟರು .  


ಸುಹಾಸ್ ಒಂದನ್ನು ಮಾನಸ ಕೈಗೆ ಕೊಟ್ಟ . ಸುಹಾಸ್ ತಂದೆಯ ಕೈಗೆ ಹಾರವನ್ನು ಕೊಟ್ಟು ನಸು ನಕ್ಕ. 


 ಮೋಹನ್ ಮಗನಿಗೆ ಮಾತು ಕೊಟ್ಟಂತೆ ಕವಿತಾ ಳ ಕೊರಳಿಗೆ  ಹಾರ      ಹಾಕಿದ .   


ಮಾನಸ ತನ್ನ ಕೈ ಯಲ್ಲಿ ಇದ್ದ ಹಾರವನ್ನು ತಾಯಿಯ ಕೈಗೆ ಕೊಟ್ಟಳು ಕವಿತಾ.


 ' ಮಾನಸ ಏನು ಇದೆಲ್ಲ ' ಗಾಬರಿ ಯಾದಂತೆ ಕೇಳಿದಳು , ' ಮಾನಸ ' ಅಮ್ಮ ಇದುವರೆಗೂ ನೀನು ಅನುಭವಿಸಿದ ವನವಾಸ ಸಾಕು . 

ಇದುವರೆಗೂ ನಾನು ನಿನ್ನಲ್ಲಿ ಏನು ಕೇಳಲಿಲ್ಲ ಈಗ ಕೆಳುತಿದ್ದೆನ್ನೇ ಇಲ್ಲ ಅನ್ನಬೇಡ ..ನನಗೂ ತಂದೆ ಬೇಕು ..ಸುಹಾಸ್ ನಂತ ಅಣ್ಣ ಬೇಕು ದಯವಿಟ್ಟು ಕೊಡುತ್ತಿಯ ' ?? 


ಕವಿತಾ ಮೋಹನ್ ನ ಮುಕ  ನೋಡಿದಳು ..ಮೋಹನ್ ಹೂ ನಗೆ ಬೀರಿ ಹಾರ ಹಾಕುವಂತೆ ಕೊರಳು ತಗ್ಗಿಸಿದ .ಕವಿತಾ ಕಣ್ಣು ತುಂಬಿ ಬಂತು ಮಗಳನ್ನು ತಬ್ಬಿ ಹಿಡಿದಳು ..ಮಾನಸ ತಾಯಿ ಗೆ ಹಾರ ಹಾಕುವಂತೆ ಬೇಡಿದಳು ..ಕವಿತಾ ಮೋಹನ್ ನನಿಗೆ ಹಾರ ಹಾಕಿದಳು ..ಎಲ್ಲರೂ ಹೂವಿನ ಮಳೆ ಸುರಿಸಿದರು. 


ಋಣಾನು ಬಂದ ರೂಪೆನ ....

ಪುರೋಹಿತರ ಬಾಯಲ್ಲಿ ಹೊರ ಹೊಮ್ಮಿತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...