ಎದೆಯಲೊಂದು ಚಿಗುರೊಡೆದ ಅಸೆಗೆ
ಮುಗುಳು ನಗೆಯ ಸಹಕಾರ
ಮನದ ಪುಟಗಳ ತಿರುವಿ ಹಾಕಲು ಬಂದ
ಹೃದಯದ ಸಾಹುಕಾರ
ಮುತ್ತ ಕೊಟ್ಟು ಮೆದುವಾಗಿಸಿದ ಒಡಲನ್ನು
ಕಸಿ ಮಾಡಿ ತಾಯ್ತನದ ಸುಖವ ಉಣಿಸಿದ
ಕೂಸು ಕೊಟ್ಟು, ಹದವಾಗಿಸಿದ ತನುವನ್ನು
ಸೌಂದರ್ಯಕೆ ಸಾಟಿ ಇಲ್ಲದ ಬೆಲ್ಲದ ಹಣ್ಣು
ಸಾರ್ಥಕತೆ ಯಲ್ಲಿ ನಿಟ್ಟುಸಿರಿನ ನೆಮ್ಮದಿ ಕಂಡು
ಕೊಂಡ ಗೃಹಿಣಿ ಪಟ್ಟ ವೇರಿದ ಹೆಣ್ಣು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ