ಹೇ ಗಿಳಿಯೇ ಮುದ್ದು ಗಿಳಿಯೇ
ನನ್ನವನಾರೇ,ಜೊತೆಗಾರನಾರೆ
ಎಂದು ಬರುವನೇ ಅವನು
ಹೇಳು ಬಾರೇ ನೀನು
ಇರುಳಲಿ ಕನಸಾಗಿ ಬರುವನು
ನೋಡಲು ಮರೆಯಾಗಿ ಹೋಗುವನು
ಮೋಡಗಳ ಮರೆಯಿಂದ
ಚೆಂದಿರನ ಮನೆಯಿಂದ
ಎಂದು ಬರುವನೇ ಅವನು
ಹೇಳು ಬಾರೇ ನೀನು
ಕನಸುಗಳ ನನಸಾಗಿಸುವವನು
ಮೈ ಮನ ಅರಳಿಸುವನು
ಕಲ್ಪನೆಯ ರಾಜಕುಮಾರನು
ಕಣ್ಣು ಮುಂದೆ ಎಂದು ಬರುವನು
ಕಾತರಿಸುತಿರುವೆ ನಾನು
ಹೇಳು ಬಾರೇ ನೀನು
ಹಗಲಿರುಳು ಅವನದೇ ಜಪ
ತಾಳದಾಗಿದೆ ಮಯ್ಯ ತಾಪ
ನೊಂದಿಹೆ ಕಾಣದೆ ಅವನ ರೂಪ
ಮರೆಯಲಿ ಮನಗೆಲ್ಲುವ ಭೂಪ
ಯಾರೇ ಅವನು ಮನ್ಮಥನು
ಹೇಳು ಬಾರೇ ನೀನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ