ಅಂಗಳದ ಸುತ್ತ ಸಖಿಯರು
ನಗುತ ಪಾಡುತ ನಲಿದಿಹರು
ನನ್ನ ಮನ ನೆನೆಯುತಿದ್ದದ್ದು
ನಿನ್ನನೇ ಮಾಧವ
ಮೈ ನವಿರೇಳಿಸುವ ರಾಗಗಳು
ದುಂಬಿಯ ಝೇoಕಾರಗಳು
ಮನ ತಣಿಸುವ ಮೋಹಕ ಪುಷ್ಪಗಳಿದ್ದರೀನು
ಬಯಸುತಿದ್ದದ್ದು ನಿನ್ನನೇ ರಾಘವ
ಮನ ತುಂಬಾ , ಕಣ್ಣು ತುಂಬಾ
ನೀ ಇರುವಾಗ , ಯಾವ ಸೋಖ್ಯವೂ
ರುಚಿಸದು, ಮನ ಬಯಸುತ್ತಿದ್ದದ್ದು
ನಿನ್ನನೇ ಕೇಶವ
ನೀ ನಿಲ್ಲದ ರಾಗ ತoಪೆನಿಸದು
ನೀ ಇರದ ಪುಷ್ಪ ಸುಗಂಧವೂ
ಸವಿ ಇರದು, ನೀನಿಲ್ಲದೆ ಏನಿದ್ದರೇನು
ಏನೊಂದೂ ರುಚಿಸದು ಕೃಷ್ಣ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ