ಶುಕ್ರವಾರ, ಜುಲೈ 2, 2021

ಗಲುವಿನ ಚಿತ್ತಾರ

 ಪಾದದಲಿ ಬಲವಿರಲಿ ಸಾಗು ನೀ ಮುಂದೆ !!

ಕಿಚ್ಚಿರಲಿ ಎದೆಯೊಳಗೆ ಸಾಗು ನೀ ಮುಂದೆ !!


ಕಷ್ಟಗಳು ಬರಲೇನು,ನಷ್ಟಗಳು ತರಲೇನು!

ಅಳುಕುತಲಿ ಸರಿಯದಿರು ಹಿಂದೆ ಹಿಂದೆ! 

ಮೂಲೆಯಲಿ ಬಿಕ್ಕದಿರು,ಅನ್ಯರಲಿ ಕಕ್ಕದಿರು !

ಆಡಿ ಕೊಂಡು ನಕ್ಕಾರು ಎಲ್ಲರೆದುರು !

ನೋವಿಗೆ ಹೆಗಲು ಕೊಡರು ಯಾರು !!


ನಿನ್ನದೇ ಯುಕ್ತಿಯಲಿ,ನಿನ್ನದೇ ಶಕ್ತಿ ಯಲಿ !

ಎದ್ದು ನಿಲ್ಲಬೇಕು ಧೈರ್ಯ ದಿಂದಲಿ !

ಗುರಿ ಯೊಂದು ಮಾತ್ರ ಕಾಣಲಿ ಎದುರಲಿ !

ಸೋಲುಗಳ ಸಾಲು ಬಿಡು ನೀನು ಕರಗಲು !

ಸುಲಭದಲಿ ಸಿಗದು ಎಂದು ಏನೂ !!


ಬರವಸೆಗಳ ಹೊಳೆವ ನಕ್ಷತ್ರಗಳು ನಗಲು !

ಅನುಮಾನ ತೆರೆ ಸರಿಸಿ ನಂಬಿಕೆಯ ನೀ ಇಡಲು 

ನಗುತ ಸ್ವಾಗತಿಸುತ ನಂದುವುದು ಅಳಲು!

ಕಾಲೆಳೆವರ ಕಡೆಗಣಿಸುತ ಸಾಗಬೇಕು!

ಕಾಯಕದಲಿ ಗೆಲ್ಲುತ ಉತ್ತರ ಕೊಡಬೇಕು!! 


ಆಸೆಗಳ ತೊರೆಯದಿರು,ಕನಸುಗಳ ಬಿಡದಿರು

ಕಾಮನ ಬಿಲ್ಲು ಕಾಣಲಾಗದು ಪ್ರತಿದಿನ 

ಆದರೊಂದು ದಿನ ತುಂಬುದು ಕಣ್ಮನ 

ಮುಗಿಲಲ್ಲಿ ಚಿತ್ತಾರ,ಮನಸಿನಲಿ ಕಾತುರ 

ಸಾಧಿಸುವ ಛಲ ಬಿಡದಿರು ಮನಸಿನೊಳಗೆ 

ಬೆಳಕಾಗಿ ಬರುವುದು ಸಂತಸ ಹೃದಯದೊಳಗೆ 


ಪಾದದಲಿ ಬಲವಿರಲಿ ಸಾಗು ನೀ ಮುಂದೆ !!೨!!

ಕಿಚ್ಚಿರಲಿ ಎದೆಯೊಳಗೆ ಸಾಗು ನೀ ಮುಂದೆ !!೨!

ಸುರಭಿ ಲತಾ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...