ಭಾನುವಾರ, ಜುಲೈ 18, 2021

 ಕನಸುಗಳ ಹೊಲಿದೊಲಿದು ಇಟ್ಟೆ 

ಮಣ್ಣಿನ ಮುದ್ದೆಯ ಶಿಲೆಯಾಗಿಸಿ ಕಾದೆ 

ಜೀವವ ತುಂಬಿ ಮಮತೆಯ ಸುರಿದೆ 

ಜೇನ ಹನಿ ಕೈಗೆ ಸಿಗುವ ಮುನ್ನ 

ಕದ್ದು ಹೋದನೆ ಮುದ್ದು ಮಗನ 


ಕಡಿ ಕಡಿದು ಬೆಣ್ಣೆಯ ತೆಗೆದೆ 

ಕುಡಿಗಾಗಿ ಕಣಜವ ತುಂಬಿದೆ 

ಮರವಾಗಿ ಹಸಿರು ಹಸನಾಗಿಸಿದೆ 

ಸಿಹಿಯಾದ  ಹಣ್ಣು ಕೊಡುವ ಮುನ್ನ 

ಕದ್ದು ಹೋದನೆ ಮುದ್ದು ಕಂದನ 


ರಕ್ತ ಮಾಂಸಗಳ ಹಂಚಿ ಕೊಟ್ಟ ತಾಯಿಗೆ 

ಕರುಳ ಹಿಂಡಿ ಜಗಕೆ ತೋರಿದ ಬಳ್ಳಿಗೆ 

ವಿಧಿಯ ಅಟ್ಟ ಹಾಸದ ನಗೆಗೆ 

ಏನೆಂದು,ಹೇಗೆಂದು ಸಂತೈಸಲಿ ಕೊನೆಗೆ 

ಕದ್ದು ಹೋದದೇಕೆ ಮುದ್ದು ಮಗನ 


ಮುಪ್ಪಿನಲಿ ಕಣ್ಣು ಮಂಜಾಗುವ ವೇಳೆ 

ಬೆಳಕಾಗಿ ದಾರಿ ತೋರವ ಬಗೆ ಹೇಗೆ 

ಕೂಸು ಮಣ್ಣಿನಲಿ ಕಸವಾಗಿ ಹೋಗಿರಲು 

ಬದುಕು ಕಾಣುವುದೆಂತು ಸಂತಸವು 

ಕದ್ದು ಹೋದನೆ ಮುದ್ದು ಕಂದನ 


ಸುರಭಿ ಲತಾ 


 ಹತ್ತಿರ ಕರೆದು ಮೆತ್ತಗೆ ಬಳಿ ಸೆಳೆದು 

ಕೆಣುಕುವುದೇಕೋ ಕಳ್ಳ 

ಬಳಸುತ ನಡುವ ನಗುವುದೇಕೋ 

ಏನೂ ಅರಿಯದವನಂತೆ ಮಳ್ಳ 


ಕರಗಿಸುತ ಮನವ,ಹಿಡಿಯುತ ಕರವ 

ಬರದಿರು ಬಳಿ ಸರಿಯುತ 

ನಿನ್ನ ಬಲ್ಲೆ ,ಒಲಿಯನು ನಿನ್ನಲಿ 

ಕಾಡದಿರು ಬೇಡುವ ಕಣ್ಣಲಿ 


ಮನಸು ಸದಾ ಸಖಿಯರಲ್ಲಿ 

ನೆಪ ಮಾತ್ರ  ನಿನಗೆ ನಾನಿಲ್ಲಿ 

ಬಳಿ ಇದ್ದಾಗ ನಿನ್ನ ತುಂಟಾಟ 

ಬಿಟ್ಟು ಹೋಗಲು ಪೇಚಾಟ 


ಭುವಿ ಆಕಾಶದಾಣೆ ನೀನೇ 

ನನ್ನ ಜೀವ ಕೇಳೇ ನನ್ನಾಣೆ 

ತಪ್ಪು ಗಳ ಬದಿಗೆ ಒತ್ತಿ 

ಕ್ಷಮಿಸೆನ್ನ ಮನದ ಒಡತಿ 


ಹರಿದಂತೆ ನದಿಯ ನೀರು 

ಬಂದು ಹೋದರು ಗೆಳತಿಯರು 

ಸಾವಿರಾರು,ನಿಂತೆ ಮನದಲ್ಲಿ 

ರಕ್ತದ ಕಣ ಕಣದಲ್ಲಿ 


ನೀನೇ ನನ್ನ  ಜೀವ 

ಅರಿಯೇ ನನ್ನ ಮನವ 

ಕೊಡು ಸಿಹಿಯಾದ ಒಲವು 

ತೋರು ಅರಳುವ ಮೊಗವು 

ಸುರಭಿ ಲತಾ  :)

ಹೃದಯ ಆಲಯ

 ನನ್ನ ಎದೆಯ ಶೃತಿಯಲ್ಲಿ 

ಹೃದಯದ ಲಯದಲ್ಲಿ 

ಹಾಡು ಬಾ ನೀ ಕೋಗಿಲೆ 

ಕೇಳಿತಾ ಮರೆವೆ ನಾನಿಲ್ಲೆ 


ಒಂದು ಪದವು ನೂರು ಭಾವಗಳಾಗಿ 

ಅದು ಹಾಡಾಗಲಿ 

ಒಂದು ಜನ್ಮವು ಹತ್ತು ಜನ್ಮಗಳಾಗಿ 

ಅದು ಅನುಬಂಧ ವಾಗಲಿ 


ಒಲವಿನ ಮಾತುಗಳೆ ದಾರವಾಗಿ 

ಪ್ರೀತಿಯೇ ಹೂಗಳಾಗಿ 

ಒಟ್ಟುಗೂಡಿ  ಹಾರವಾಗಲಿ 

ಅದು ದೇವನಿಗೆ ಒಪ್ಪವಾಗಲಿ 


ಪ್ರತಿ ರಾತ್ರಿಯು ಕನಸಾಗಿ 

ನಿಧಿರೆಯಿಂದ   ಏಳಿಸಲಿ 

ಮಗುವಂತೆ ಬಳಿ ಸಾರಿ 

ನನ್ನ ಮಡಿಲ ಸೇರಲಿ 


ಪ್ರೀತಿಯಲಿ ಜೀವಗಳೊಂದಾಗಲಿ 

ಅಳಿಸದಂತೆ ಸ್ಥಿರವಾಗಲಿ 


ಸುರಭಿ ಲತಾ

ಚಿಂತೆ

 ಕೂತಲ್ಲೆ ಕೂತೆ ಮನದಲ್ಲಿ ಕಾಡುವ ಚಿಂತೆ 

 ಬೆರೆತು ನಲಿದ ಮಧುರ ನೆನಪುಗಳ ಕಂತೆ 

 ಬಂತೇಕೆ ಆಶಾಡ ನಮ್ಮಿಬ್ಬರ ನಡುವೆ 

ಬಯಕೆ ಮೂಡಿರಲು ಕೆನ್ನೆಯಲಿ ಮೊಡವೆ 


ನವ ವಧುವ ಕೆಣಕಿ ಕೆಂಪಾಗಿಸಿದ ಗೆಳತಿಯರು 

ಸಂಸಾರದಲ್ಲಿ ಮಿಂದೆದ್ದ ಒಡತಿಯರು 

ನೂರೆಂಟು ಅನುಭವದ ಮಾತುಗಳು 

ಎದೆಯಲ್ಲಿ ಮೂಡುವಂತೆ ತೂತುಗಳು 


ಒಪ್ಪಿ ಅಪ್ಪಿದ ಮೇಲೆ ಅನುಮಾನ ವೇತಕೆ 

ಪ್ರೀತಿಯೆ ನಮ್ಮಿಬ್ಬರ ಬಾಳಿನ ಹೊದಿಕೆ 

ಬಣ್ಣದ ಕನಸುಗಳಲಿ ತುಂಬಿರಲು ಕಣ್ಣುಗಳು 

ಕಳೆಯುವುದೆಂದೋ ವಿರಹದ ಈ ದಿನಗಳು 


ಮುಂಬಾಗಿಲಿನವರೆಗೂ ಸುಮ್ಮನೆ ನಡಿಗೆ 

ಸಿಹಿಯ ಒಪ್ಪಿಸಿದೆ ಮಡಿಯುಟ್ಟು ಬೇಡಿಕೆ 

ಮಬ್ಬುಗತ್ತಲ ಮಂದ ದೀಪದಲಿ 

ತೇಲಿರಲು ಕೈ ಹಿಡಿದು ನಡೆದ ನೆನಪಲ್ಲಿ 


ಶಬರಿಯಂತೆ ಕಾದಿಹೆನು ಶ್ರಾವಣ ಬರುವಿಕೆಯಲಿ 

ತಿಂಗಳು ಕಳೆವುದರೊಳಗೆ ಚಿಗುರೊಡೆವ ಬಯಕೆಯಲಿ 

ನಯನಗಳಲಿ ನೂರು ಬೆಳಕಿನ ಕಿರಣಗಳು 

ಮಿನುಗುವುದೆಂದೋ ಬೆಳದಿಂಗಳು 


ಸುರಭಿ ಲತಾ

ಶನಿವಾರ, ಜುಲೈ 17, 2021

ಕೈಷ್ಣ

 ಅಂಗಳದ  ಸುತ್ತ ಸಖಿಯರು 

ನಗುತ ಪಾಡುತ ನಲಿದಿಹರು

ನನ್ನ ಮನ ನೆನೆಯುತಿದ್ದದ್ದು 

ನಿನ್ನನೇ  ಮಾಧವ 


ಮೈ ನವಿರೇಳಿಸುವ ರಾಗಗಳು 

ದುಂಬಿಯ ಝೇoಕಾರಗಳು

ಮನ ತಣಿಸುವ ಮೋಹಕ ಪುಷ್ಪಗಳಿದ್ದರೀನು 

ಬಯಸುತಿದ್ದದ್ದು ನಿನ್ನನೇ ರಾಘವ 


ಮನ ತುಂಬಾ , ಕಣ್ಣು ತುಂಬಾ 

ನೀ ಇರುವಾಗ , ಯಾವ ಸೋಖ್ಯವೂ

ರುಚಿಸದು, ಮನ ಬಯಸುತ್ತಿದ್ದದ್ದು 

ನಿನ್ನನೇ  ಕೇಶವ 


ನೀ ನಿಲ್ಲದ ರಾಗ ತoಪೆನಿಸದು  

ನೀ ಇರದ ಪುಷ್ಪ ಸುಗಂಧವೂ 

ಸವಿ ಇರದು, ನೀನಿಲ್ಲದೆ    ಏನಿದ್ದರೇನು 

ಏನೊಂದೂ ರುಚಿಸದು ಕೃಷ್ಣ 


ಸುರಭಿ ಲತಾ

ಶುಕ್ರವಾರ, ಜುಲೈ 16, 2021

 ನೂರು ಮಾತು ನೂರು ಚರ್ಚೆಗಳು 

ನೀ ಬರೆದ ಸಾವಿರ ಸಾಲುಗಳು 

ಅದರಲ್ಲಿ ನಾ ಆರಿಸಿ ಒಪ್ಪಿಕೊಂಡದ್ದು ನಿನ್ನ ಬರಹಗಳು ಮಾತ್ರವೇ ಹೊರತು 

ಪ್ರೀತಿ,ಪ್ರೇಮ ಎಂಬ ಚದುರುವ ಮೋಡಗಳ 

ನಡುವೆ ನಾ ಬದುಕಲಾರೆ ಗೆಳೆಯ 


ಎದೆಯೇ ಬಗೆದು ಹೊರಹಾಕಿದ ಒಂದೊಂದು 

ಅಕ್ಷರಗಳು,ಒಡಲೊಳಗೆ ತಿರುಚಿದಂತ ಅನುಭವಗಳು,ಮುತ್ತು ಪೋಣಿಸಿದಂತೆ 

ಸಾಲುಗಳ ಮೆರವಣಿಗೆ,ಹೊಕ್ಕಿತು ಕಣ್ಣೊಳಗೆ 

ಅಲ್ಲಿ ಹುಟ್ಟದ ಪ್ರೀತಿಯ ಅಮಲಿಗೆ ನಾ 

ಬಲಿಯಾಗಲಾರೆ ಗೆಳೆಯ 


ಅಂದ ಚೆಂದ ವಯಸ್ಸು ಗಳು ನಿಲ್ಲದ ಕುದುರೆ 

ಕ್ಷಣಿಕ ಆಕರ್ಷಣೆಗಳು, ಬದುಕಿನ ಪುಟಗಳು 

ತಿರುವಿ ಹಾಕಿದಂತೆ ಮುಂದೆ ಸಾಗಬೇಕಲ್ಲವೆ 

ನಿಂತ ನೀರು ಕೊಳೆತು ನಾರುವಂತಾಗಬಾರದು 

ಅಪವಾದಗಳ ಸುಳಿಯಲ್ಲಿ  ಅಂತರಂಗದ ಹಪ ಹಪಿಗಳಿಗೆ ನಾ ನನ್ನ ಬಲಿಕೊಡಲಾರೆ ಗೆಳೆಯ


ಕೂತು ಎಷ್ಟೋ ವಿಷಯಗಳ ಹೊಂದಾಣಿಕೆ ಯಾಗಿರಬಹುದು,ಇಷ್ಟ ಕಷ್ಟ ಗಳು ಅದಲು ಬದಲಾಗಿರಬಹುದು. ನೋಡುವ ಅರ್ಥೈಸುವ 

ಮನಸುಗಳು ಒಂದಕ್ಕೊಂದುಮಿಡಿದಿರಬಹುದು  

ಆದರೆ ಕನಸುಗಳೇ ಬೇರೆ ವಾಸ್ತವವೇ ಬೇರೆ 

ಸತ್ತು ಸತ್ತು ಮನಸಾಕ್ಷಿಗೆ ವಿರುದ್ದ ನಡೆಯಲಾರೆ ಗೆಳೆಯ 


ಮೋಸಗಾತಿಯ ಪಟ್ಟ ಕೊಡದಿರು ಎಲ್ಲರ ಮುಂದೆ,ನಾ ಮೆಚ್ಚಿದ್ದು ಹಚ್ಚಿಕೊಂಡದ್ದು ನಿನ್ನೊಳಗಿನ ಭಾವನೆಗಳನ್ನು ಮಾತ್ರ ವೇ ಗೆಳೆಯ


ಸುರಭಿ ಲತಾ 


ಗುರುವಾರ, ಜುಲೈ 15, 2021

 ಹೇ ಗಿಳಿಯೇ ಮುದ್ದು ಗಿಳಿಯೇ 

ನನ್ನವನಾರೇ,ಜೊತೆಗಾರನಾರೆ 

ಎಂದು ಬರುವನೇ ಅವನು 

ಹೇಳು ಬಾರೇ ನೀನು 


ಇರುಳಲಿ ಕನಸಾಗಿ ಬರುವನು 

ನೋಡಲು ಮರೆಯಾಗಿ ಹೋಗುವನು 

ಮೋಡಗಳ ಮರೆಯಿಂದ 

ಚೆಂದಿರನ ಮನೆಯಿಂದ 

ಎಂದು ಬರುವನೇ ಅವನು 

ಹೇಳು ಬಾರೇ ನೀನು 


ಕನಸುಗಳ ನನಸಾಗಿಸುವವನು 

ಮೈ ಮನ ಅರಳಿಸುವನು 

ಕಲ್ಪನೆಯ ರಾಜಕುಮಾರನು 

ಕಣ್ಣು ಮುಂದೆ ಎಂದು ಬರುವನು 

ಕಾತರಿಸುತಿರುವೆ ನಾನು 

ಹೇಳು ಬಾರೇ ನೀನು 


ಹಗಲಿರುಳು ಅವನದೇ ಜಪ 

ತಾಳದಾಗಿದೆ ಮಯ್ಯ ತಾಪ 

ನೊಂದಿಹೆ ಕಾಣದೆ ಅವನ ರೂಪ 

ಮರೆಯಲಿ ಮನಗೆಲ್ಲುವ ಭೂಪ 

ಯಾರೇ ಅವನು  ಮನ್ಮಥನು 

ಹೇಳು ಬಾರೇ ನೀನು

ಬುಧವಾರ, ಜುಲೈ 14, 2021

 ಮರೆತೆಯಾ ಮುರುಳಿದರನೆ ನನ್ನ 

ಎಷ್ಟೊಂದು ನಂಬಿದ್ದೆ ನಾ ನಿನ್ನ 

ಸಖಿಯರು ಸುತ್ತಲೂ ಇರುವಾಗ 

ಕೇಳಿಸದಾದೆಯ ಮೋಹನ ರಾಗ 


ಮಧುವನದಲ್ಲಿ ಮೌನದಿ ಕುಳಿತ 

ರಾಧೆಯ ನೆನಪಾಗಲಿಲ್ಲವೆ 

ಕೊಟ್ಟ ಮಾತು ಇಟ್ಟ ಭಾಷೆ 

ತರಿಸಿದೆ ಇಂದು ನಿರಾಸೆ 


ರಾಧೆ ಎನುವ ನುಡಿ ಕೇಳದೆ 

ನನ್ನ ಹೆಸರೇ ನಾ ಮರೆತೆ 

ಕಣ್ಣ ನೀರು ಜಾರುತಿರಲು 

ಬರದೆ  ಏಕೆ ಹೋದೆ 


ಕೊರಳು ಬಿಗಿಯುವ ಮುನ್ನ 

ಒಮ್ಮೆ ಅಪ್ಪಿ ಸಂತೈಸು ನನ್ನ 

ಮಿಡಿವ ಹೃದಯ ತಂಪಾಗಲಿ 

ರಾಧೆಯ ಜನ್ಮ ಸಾರ್ಥಕಗೊಳಲಿ 


ಸುರಭಿ ಲತಾ

ಭಾನುವಾರ, ಜುಲೈ 11, 2021

 #samyojane 

ಹೇಗೆ ಕಾಣಲೊ ಕೃಷ್ಣ ನಿನ್ನ ನಾನು 

 ಕರೆದರೆ ಕರೆಯ ಕೇಳಿ ಬರುವೆ ಏನು 

ಬಕುತಿಯಲಿ ಬೇಡಲು ನಿನ್ನ 

ಬವಣೆ ಗಳಲೆ ಉಳಿಸಿದೆಯೊ ನನ್ನ 


ಹತ್ತು ಮಾರು ದೂರದಲಿ ಕೋತು 

ಹತ್ತಿ ಬಾ ಎನಲು,ಬರದೆ ಹೋದೆ ಸೋತು 

ಒಡಲಿಗೆ ನೋರು ನೋವನಿಟ್ಟು 

ನಗುವೆ ಏನು ಕೈಯ್ಯ ಬಿಟ್ಟು 


ನೆನೆದೊಡನೆ ಮನದಲ್ಲಿ ನೀ ಬಂದೆ 

ಎದುರಿಗೆ ಬರದೆ ಕಾಡಿಸುವೆಯಾ ತಂದೆ 

ಸಂಬಂಧಗಳ ಸರಪಳಿಯ ಸುತ್ತಿ 

ಸಾಧಿಸಿದೆ ಏನು ಮೋಹವ ಬಿತ್ತಿ 


ಕಾಮ ಕ್ರೋಧಗಳ ಗೆಲ್ಲಲಾಗದೆ ಅಂದು 

ಸೋತು ಶರಣಾಗಿ ಬೇಡಿದೆನಯ್ಯಾ ಇಂದು 

ಬಕುತಿಯ ಅರಿತು ಶಕುತಿಯ ನೀಡದೆ 

ಮಸಣ ಸೇರಲೆ ನಿನ್ನ ಕಾಣದೆ 


ಹೇಗೆ ಕಾಣಲೊ ಕೃಷ್ಣ ನಿನ್ನ ನಾನು 

ಕರೆದರೆ ಕರೆಯ ಕೇಳಿ ಬರುವೆ ಏನು 


ಸುರಭಿ ಲತಾ

ಶನಿವಾರ, ಜುಲೈ 10, 2021

 ಬಿಡಲೊಲ್ಲೆನೋ ಕೃಷ್ಣ ನಿನ್ನ 

ಬೆಣ್ಣೆಯ ತಿಂದು  ಓಡಿ ಹೋಗುವೆ 

ಮೆಲ್ಲ ಮೆಲ್ಲನೆ ಮುಗುಳು ನಗೆಯಲಿ 

ಮನವ ಕದ್ದು ಮರೆಯಾಗುವೆ 


ಬಿಡಲೊಲ್ಲೆನೊ ಕೃಷ್ಣ ನಿನ್ನ 


ಜಳಕವಾಡಲು ನದಿಯ ತೀರದಲಿ 

ಬಂದು ಸೇರುವೆ ಕಡಲಿನಲಿ 

ಬೆತ್ತಲ ದೇಹವ ಕಂಡು 

ಕೊಲ್ಲುವೆ ನೀ ಕಣ್ಣುಗಳಲಿ 


ಬಿಡಲೊಲ್ಲೆನೋ ಕೃಷ್ಣ ನಿನ್ನ 


ಯಶೋದೆಗೆ ಹೇಳಲು ತುಂಟಾಟ 

ಮುನಿದವನಂತೆ ನಟಿಸುವೆ 

ಬರದೇ ಬಳಿ ವಿರಹದಿ ಕಾಡಿಸುವೆ 

ಸಖಿಯರನೇ ಬೇಡಿಸುವೆ 


ಬಿಡಲೊಲ್ಲೆನೋ ಕೃಷ್ಣ ನಿನ್ನ 


ಮುದ್ದು ಮರಳು ಮಾತಿನಲಿ 

ಮುತ್ತ ಕೇಳಿ ಮರೆಯಲಿ 

ಮೆತ್ತನೆ ಗಲ್ಲವ ಹಿಂಡಿ 

ಮತ್ತು ಬರೆಸಿ ಓಡುವೆ 


ಬಿಡಲೊಲ್ಲೆನೋ ಕೃಷ್ಣ ನಿನ್ನ 


 ಸುರಭಿ ಲತಾ

ಶುಕ್ರವಾರ, ಜುಲೈ 9, 2021

 ಸಮಯವು ಬೇಕು 

**************

ನೆನಪುಗಳ ಮರೆಯಲು 

ಸಮಯವು ಬೇಕು 

ಕಣ್ಣು ಗಳಿಗೆ ನಿದ್ದೆ ಹತ್ತಲು 

ಸಮಯವು ಬೇಕು 


ಅವನ ಮರೆಯಲು 

ಅಷ್ಟು ಸುಲಭವಲ್ಲ 

ಹೃದಯವ ಸಮಾದಾನಿಸಲು 

ಸಮಯವು ಬೇಕು 


ಜನ ಜಂಗುಳಿಗಳ ನಡುವೆ 

ನೆನಪಾಗುವ ಅವನು 

ಕಣ್ಣು ತುಂಬಿ ಸುರಿವ ಹನಿಯ 

ಮರೆಮಾಚಲು ಸಮಯವು ಬೇಕು 


ಪ್ರಾಣಕ್ಕಿಂತ ಹೆಚ್ಚು ಅವನಾದ 

ಕಾರಣ ಹೇಳದೆ ಮರೆಯಾದ 

ಮನಸ್ಸಿಗೆ ನಂಬಿಕೆ ಬರೆಸಲು 

ಸಮಯವು ಬೇಕು 


ಅಂದು ಕೊಂಡಂತೆ 

ಅಂದವಾಗಿ ಎಲ್ಲವೂ 

ನಡೆಯುವುದಿಲ್ಲ ,ಜೀವನ 

ನನ್ನ ಅಪ್ಪನ ಮನೆಯಲ್ಲ 

ಸುರಭಿ ಲತಾ

ಗುರುವಾರ, ಜುಲೈ 8, 2021

 ಮೌನದಲೇ ಕೊಂದು ಬಿಡಬೇಡ ಗೆಳೆಯ 

ಕನಸುಗಳು ಕಾತರಿಕೆಯಿಂದ ಕಣ್ಣೀರಿಡುತಿದೆ 

ಸುರಭಿ ಲತಾ 

 ತುಂಬಿದ ಮನೆ ನನ್ನ ಮನೆ 

ಅಮ್ಮನಂತೆ ಅತ್ತೆಮ್ಮ 

ಮಗಳಂತೆ ನಾದಿನಿ 

ಬೆನ್ನು ತಬ್ಬಿದ ಕಂದ 


ಬರಲು ಗಣಪತಿಯ ಹಬ್ಬ 

ಮಾಡುವೆ ಒಬ್ಬಟ್ಟು ಕಡುಬು 

ನಲಿಯುವರು ನನ್ನವರು 

ಹೆಮ್ಮೆ ಯಿಂದಲಿ ಹೊಗಳುವರು 


ಸುತ್ತ ಮುತ್ತಲೂ ಹತ್ತಾರು ಮನೆ 

ಕೊಟ್ಟು ಬರುವೆ ತಿಂಡಿ ನಾನೆ 

ಬಂಧು ಗಳಂತೆ ನಾವೆಲ್ಲ 

ಆಚರಿಸುವೆವು ದಿನವೆಲ್ಲಾ 


ವರುಷದ ಕಷ್ಟ ನೋವು ಮರೆತು 

ಬೇಡುವೆವು ಭಗವಂತನ 

ತುಂಬಿದ ಮನೆ ಕೊಟ್ಟವನ 

ನಂದಗೋಕುಲವಾಯಿತು ಮನ 

ಸುರಭಿ ಲತಾ

 ಎದೆಯೊಳಗೆ ಹಸಿ ಹಸಿ ಬಯಕೆಗಳ ಮೊಳಕೆಗಳು 

ಹೃದಯದ ತುಂಬಾ ಹೊಸ ಹೊಸ ಕನಸುಗಳು 


ಎತ್ತರೆತ್ತರಕೆ ಮುಗಿಲಲಿ ಹಾರಿ ನೆಗೆಯುವಾಸೆ 

ಮರೆತು ಹೋಗಬಯಸುವೆ ನನ್ನ ಈ ವಯಸೆ 


ಎಷ್ಟೊಂದು ಆಸೆಗಳು ಹಸಿರಿವಾಗಲೇ ನನ್ನಲ್ಲಿ 

ಒಡಲು ಪುಷ್ಟಿ ಕೊಡದೆ ಕಾಡಿಸಿದೆ ಮೈಯಲ್ಲಿ 


ಬಿಗಿದಪ್ಪಿ ಹಿಡಿದ ನೂರು ನೋವುಗಳಿಗೆ 

ಸಮಾಧಾನಿಸಿ ಕೊಡುವೆ ಕಹಿ ಗುಳಿಗೆ 


ನಗುವ ಮೊಗದ ಮುಖವಾಡ ಹೊತ್ತುತಲಿ  

ಮರೆವೆ ಸ್ನೇಹಿತರ ಸಂಗ ನಂಬಿಕೆಯ ಬಿತ್ತುತಲಿ 


ದಣಿಯದಿರಲಿ ನನ್ನ ಮನಸು,ಸೋಲದಿರಲಿ ಹೀಗೆ 

ಬರೆಯುತ ಗೆಲ್ಲುವ ಯತ್ನದಲಿ ಮರೆವೆ ಈ ಬೇಗೆ 


ದೇವರ ಮೇಲೆ ಬರದು ಯಾಕೊ ಮುನಿಸು 

ಪಾಪವ ಮಾಡಿದ ಈ ಜನ್ಮವ ನೀ ಮನ್ನಿಸು 


ಧಹಿಸಿ ಧಹಿಸಿ ಸುಡದಿರು ಹೀಗೆ ಪ್ರತಿ ದಿನ 

ಕರೆದು ಕೊಂಡು ಬಿಡು ಕರುಣೆ ತೋರಿ ನನ್ನ 


ಸುರಭಿ ಲತಾ

ಮಂಗಳವಾರ, ಜುಲೈ 6, 2021

 ಸಿಂಗಾರ ಗೊಳ್ಳದಿರು   ಇಷ್ಟು ಕೃಷ್ಣ 

ಲೋಕದ ದೃಷ್ಟಿ ತಾಕಿಯಾದು 


 ತೂರಾಡುವ ಮುಂಗುರುಳ ಹೋಯ್ಲಾಟ  ದುಂಬಿಗಳಿಗೇನೋ ತಮ್ಮ ತಮ್ಮಲ್ಲೆ ಕಾದಾಟ 

ಸವರಿ ಹೋಗುವ ಬಯಕೆ ಹೊತ್ತು 

ಮತ್ತೆ ಮತ್ತೆ ಬರುವುದು ನಿನ್ನ ಸುತ್ತು ಮುತ್ತು 


ಸಿಂಗಾರ ಗೊಳ್ಳದಿರು  ಇಷ್ಟು ಕೃಷ್ಣ 

ಲೋಕದ ದೃಷ್ಟಿ ತಾಕಿ ಯಾತು 


ಕೊರಳಲಿ ನಲಿವ ಕಂಠೀ ಹಾರವ 

ಮುಗುಳು ನಗೆಯ ಹೊತ್ತಾ ಮೊಗವ 

ಕಾಣಲು ತವಕ ಹೃದಯ ದೊಳಗೆ  

ನಿದ್ರೆ ಬರದು ವಿರಹದಲಿ ಒಂದು ಗಳಿಗೆ 


ಸಿಂಗಾರ ಗೊಳ್ಳದಿರು ಇಷ್ಟು ಕೃಷ್ಣ 

ಲೋಕದ ದೃಷ್ಟಿ ತಾಕಿ ಯಾತು 


ಕಾಲ್ಗಳ ಗೆಜ್ಜೆ  ಸದ್ದಿಗೆ ಮೆಲ್ಲ ಮೆಲ್ಲಗೆ  

ಒಲವು ಲಗ್ಗೆ ಇಟ್ಟಿತು ಎದೆಯ ಒಳಗೆ 

ಕೊರಳ ರಾಗದ ಮೋಹನ ನಾದಕೆ 

ಕರಗಿ ಹೋಗ್ವಳು  ಗೋಗುಲ ಬಾಲಿಕೆ 


ಸಿಂಗಾರ ಗೊಳ್ಳದಿರು ಇಷ್ಟು ಕೃಷ್ಣ 

ಲೋಕದ ದೃಷ್ಟಿ ತಾಕಿ ಯಾತು 


ಸುರಭಿ ಲತಾ 


ಸೋಮವಾರ, ಜುಲೈ 5, 2021

 ನಲ್ಲ ನನ್ನ ನಲ್ಲ ಎಂದು ಕಾಣುವೆನೋ ನಾನು ನಿನ್ನ 

ನಡು ನಡುವೆ ರಾತ್ರಿ ಯಲಿ ಬೆಚ್ಚಿ ಬೀಳುವೆ ನೆನಪಲ್ಲಿ 

ತವಕ ತವಕ ನಿನ್ನ ಕಣ್ಣ ತುಂಬಾ ಕಾಣುವ ತನಕ ಬರಲೇನು ಹುಡುಕಿ ನಿನ್ನ ,ಅಡೆ ತಡೆಗಳ ದೂಡಲೆ ಇನ್ನ 


ಕಳೆದ ಸುಂದರ ಸಮಯ ಹೇಗೆ ಮರೆಯಲೊ ಗೆಳೆಯ 

ಒಂದೇ ಆ ಕ್ಷಣವೂ ತುಂಬಿದೆ ನೀನೇ ಕಣ ಕಣವು 

ಕಲ್ಲಿನಂತೆ ಕರಗದ ವಸ್ತು ,ನಿಂತೆ ಆವರಿಸಿ ಮಸ್ತಕವು 

ಬಿಡಲೊಲ್ಲದು ಕಾಡುತಿರಲು ನಿನ್ನ ಬಗೆಗಿನ ವಿರಹವು 


ನೀನು ಅಲ್ಲೇ ದೋರದ ಊರಿನಲಿ ನಿಂತು ನಗುವೆ 

ನಿನ್ನ ನಗುವ ಕಾಣುತಲಿ ನನ್ನ ನಾನು ಮರೆವೆ 

ಬಾನಿನ ಚೆಂದಿರನ ಮೊಗವ ಕಾಣಲು ಚೆಂದ 

ಹೋಲಿಸಲು ಸಾಲದು ಮೋಹನ ನಿನ್ನ ಅಂದ 


ಸೊರಗಿ ಹೋಗುವ ಮುನ್ನ, ಬರಸೆಳೆದು ಅಪ್ಪು ನನ್ನ 

ಒಂದು ಸಣ್ಣ ನೆಪವೊಡ್ಡಿ ಕರೆದು ಬಿಡ ಬಾರದೆ 

ಮೊಗ್ಗು ಅರಳುವಂತೆ ಅರಳುವಳು ಈ ಮುಗುದೆ 

ಗೆಲುವಿನ ರುಚಿಯ ತೋರಿ ಬಿಡು,ಪ್ರೀತಿಗೆ ಇರದು  ಕಾಯಿದೆ 


ಸುರಭಿ ಲತಾ

ಶನಿವಾರ, ಜುಲೈ 3, 2021



 ಮಾತು ಮಾತು ಸದಾ ಮಾತು 





ಏನೋ ಮಾತು ಅವರಿವರ ಬಗೆಗೆ ಮಾತು 

ಆಗು ಹೋಗು ಗಳ ಬಗೆಗೆ ಮಾತು 

ರಾಜಕೀಯದ ಬಗೆಗೆ ಮಾತು 

ಬೇಸರದ ಮಾತು,ನೋವಿನ ಮಾತು 

ಕುಹಕದ ಮಾತು,ಅಟ್ಟ ಹಾಸದ ಮಾತು 

ಮೌನದಿದಿರದು ಏತಕೀ ಜಗತ್ತು!? 


ತನ್ನ ಮನೆಯ ಹೆಂಚಿನ ಕೆಳಗೆ 

ಸಾವಿರ ಸಮಸ್ಯೆ ಗಳ ಕಟ್ಟಿದ ಗೂಡು 

ನಕ್ಕು ಕೃಕುಲುಕುವ ಮನದ ಹಿಂದೆ 

ಸೇಡಿನ ಸಂಚು ಹೊಂಚು ಹಾಕುತಿರಲು 

ತನ್ನದೇ ವ್ಯೂಹದಲಿ ತಾ ಬಂಧಿ ಯಾಗಿರಲು 

ಮೌನದಿಂದಿರದು ಏತಕೀ ಜಗತ್ತು!? 


ಮಾತೆತ್ತಿದರೆ ಕೋಪ,ಅಹಂಕಾರದ ಅಟ್ಟ ಹಾಸ 

ತಪ್ಪು ಗಳ ತಿದ್ದಿಕೊಳ್ಳುವ ಪರಿ ಅರಿಯದೇ 

ತಾ ಮಾಡಿದುದೇ ಸರಿ ಎನ್ನುತ ಭಾಷಣ 

ಒಮ್ಮೆ ಯಾದರೂ ಕುಳಿತು ಯೋಚಿಸುವುದೇ 

ತನ್ನ ಕರ್ತವ್ಯದ ಬಗೆಗೆ ಚಿಂತಿಸುವುದೇ 

ಮೌನದಿಂದಿರದು ಏತಕೀ ಜಗತ್ತು!? 


ಧ್ಯಾನ, ಪೂಜೆ,ಪಾರಾಯಣ ದಿಂದಲೇ 

ಮನಸ್ಸಿಗೆ ಶಾಂತಿ ನೆಮ್ಮದಿ, ಮಕ್ಕಳ ಏಳ್ಗೆ 

ಸರಿ ದಾರಿಯ ಪಯಣಕೆ ದಾರಿ ದೀಪ 

ದಿನದ ಇಪ್ಪತ್ತು ನಾಲ್ಕು ಗಂಟೆಗಳ ದುಡಿತ 

ದೇಹಕೆ ದಣಿವಿನ ನೋವು ಇಷ್ಟಾದರೂ

ಮೌನದಿಂದಿರದು ಏತಕೀ ಜಗತ್ತು!? 


ಮನೆಯ ಮೋಲೆಯ,ನಿಶ್ಯಬ್ಧ ತಾಣದಲಿ 

ಕಣ್ಣು ಮುಚ್ಚಿ ನಡೆದು ಬಂದ ಹಾದಿಯ ನೆನೆದು 

ಸರಿ ತಪ್ಪಗಳ  ಮನನ ಮಾಡುತಲಿ 

ಅಷ್ಟ ದಿಕ್ಪಾಲಕರ ಕ್ಷಮೆ ಯಾಚಿಸುತ 

ಸನ್ಮಾರ್ಗದಲಿ ನಡೆಯುವ ಪಣ ತೊಡಲು 

ಮೌನದ ಅರ್ಥ ಅರಿವಾಗುವುದು,


ನಾಲಿಗೆಗೂ ಬೇಕು ವಿಶ್ರಾಂತಿ, ಅಲ್ಲವೆ!? 


ಸುರಭಿ ಲತಾ 


ಶುಕ್ರವಾರ, ಜುಲೈ 2, 2021

ಗಲುವಿನ ಚಿತ್ತಾರ

 ಪಾದದಲಿ ಬಲವಿರಲಿ ಸಾಗು ನೀ ಮುಂದೆ !!

ಕಿಚ್ಚಿರಲಿ ಎದೆಯೊಳಗೆ ಸಾಗು ನೀ ಮುಂದೆ !!


ಕಷ್ಟಗಳು ಬರಲೇನು,ನಷ್ಟಗಳು ತರಲೇನು!

ಅಳುಕುತಲಿ ಸರಿಯದಿರು ಹಿಂದೆ ಹಿಂದೆ! 

ಮೂಲೆಯಲಿ ಬಿಕ್ಕದಿರು,ಅನ್ಯರಲಿ ಕಕ್ಕದಿರು !

ಆಡಿ ಕೊಂಡು ನಕ್ಕಾರು ಎಲ್ಲರೆದುರು !

ನೋವಿಗೆ ಹೆಗಲು ಕೊಡರು ಯಾರು !!


ನಿನ್ನದೇ ಯುಕ್ತಿಯಲಿ,ನಿನ್ನದೇ ಶಕ್ತಿ ಯಲಿ !

ಎದ್ದು ನಿಲ್ಲಬೇಕು ಧೈರ್ಯ ದಿಂದಲಿ !

ಗುರಿ ಯೊಂದು ಮಾತ್ರ ಕಾಣಲಿ ಎದುರಲಿ !

ಸೋಲುಗಳ ಸಾಲು ಬಿಡು ನೀನು ಕರಗಲು !

ಸುಲಭದಲಿ ಸಿಗದು ಎಂದು ಏನೂ !!


ಬರವಸೆಗಳ ಹೊಳೆವ ನಕ್ಷತ್ರಗಳು ನಗಲು !

ಅನುಮಾನ ತೆರೆ ಸರಿಸಿ ನಂಬಿಕೆಯ ನೀ ಇಡಲು 

ನಗುತ ಸ್ವಾಗತಿಸುತ ನಂದುವುದು ಅಳಲು!

ಕಾಲೆಳೆವರ ಕಡೆಗಣಿಸುತ ಸಾಗಬೇಕು!

ಕಾಯಕದಲಿ ಗೆಲ್ಲುತ ಉತ್ತರ ಕೊಡಬೇಕು!! 


ಆಸೆಗಳ ತೊರೆಯದಿರು,ಕನಸುಗಳ ಬಿಡದಿರು

ಕಾಮನ ಬಿಲ್ಲು ಕಾಣಲಾಗದು ಪ್ರತಿದಿನ 

ಆದರೊಂದು ದಿನ ತುಂಬುದು ಕಣ್ಮನ 

ಮುಗಿಲಲ್ಲಿ ಚಿತ್ತಾರ,ಮನಸಿನಲಿ ಕಾತುರ 

ಸಾಧಿಸುವ ಛಲ ಬಿಡದಿರು ಮನಸಿನೊಳಗೆ 

ಬೆಳಕಾಗಿ ಬರುವುದು ಸಂತಸ ಹೃದಯದೊಳಗೆ 


ಪಾದದಲಿ ಬಲವಿರಲಿ ಸಾಗು ನೀ ಮುಂದೆ !!೨!!

ಕಿಚ್ಚಿರಲಿ ಎದೆಯೊಳಗೆ ಸಾಗು ನೀ ಮುಂದೆ !!೨!

ಸುರಭಿ ಲತಾ 


ಗುರುವಾರ, ಜುಲೈ 1, 2021

 ಕಣ್ಣು ಕೊರೈಸುವ ಅಂದಗಾರನು ನೀನೇನಲ್ಲಾ 

ಕಲ್ಲಿನ ಮನಸ್ಸನ್ನು ಕರಗಿಸುವ ಗುಣವಿದೆಯಲ್ಲ 

ಮಾತಿನ ಮಲ್ಲನು ನೀನೇನಲ್ಲ 

ಮೌನದಲಿ ಎದೆಯ ಹೊಕ್ಕಿದೆಯಲ್ಲ 


ಕಣ್ಣ ನೋಟದಲೇ ಒಲವ ಧಾರೆ ಹರಿಸುವೆ 

ಮಿಂಚಂತೆ ಸುಳಿದು ನಾಚಿಕೆಯ ಹೊಮ್ಮಿಸುವೆ 

ಒಮ್ಮೆ ಯಾದರೂ ತಲೆಯ ಕೂದಲಲಿ ಕೈ ಆಡಿಸುವಾಸೆ 

ಚಿಗುರು ಮೀಸೆಯ ಸರದಾರ ನನ್ನವನೆಂದು ಬೀಗುವಾಸೆ 


ತುಟಿಯಂಚಿನ ಮೃದು ನಗುವಿನಲಿ ಮೈ ಮರೆವಾಸೆ 

ವಿಶಾಲವಾದ ನಿನ್ನೆದೆಗೆ ಒರಗಿ ಕನಸ ಕಟ್ಟುವಾಸೆ 

ಎಲ್ಲರಂತಲ್ಲ ನೀನು,ನಿನ್ನ ಬಿಟ್ಟಿರೆ ನಾನು 

ಮಧುರ ರಾಗವು ತಬ್ಬಿರಲಿ ನಮ್ಮಿಬ್ಬರನು 


ಸುರಭಿ ಲತಾ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...