ಸಿಂಗಾರ ಗೊಳ್ಳದಿರು ಇಷ್ಟು ಕೃಷ್ಣ
ಲೋಕದ ದೃಷ್ಟಿ ತಾಕಿಯಾದು
ತೂರಾಡುವ ಮುಂಗುರುಳ ಹೋಯ್ಲಾಟ ದುಂಬಿಗಳಿಗೇನೋ ತಮ್ಮ ತಮ್ಮಲ್ಲೆ ಕಾದಾಟ
ಸವರಿ ಹೋಗುವ ಬಯಕೆ ಹೊತ್ತು
ಮತ್ತೆ ಮತ್ತೆ ಬರುವುದು ನಿನ್ನ ಸುತ್ತು ಮುತ್ತು
ಸಿಂಗಾರ ಗೊಳ್ಳದಿರು ಇಷ್ಟು ಕೃಷ್ಣ
ಲೋಕದ ದೃಷ್ಟಿ ತಾಕಿ ಯಾತು
ಕೊರಳಲಿ ನಲಿವ ಕಂಠೀ ಹಾರವ
ಮುಗುಳು ನಗೆಯ ಹೊತ್ತಾ ಮೊಗವ
ಕಾಣಲು ತವಕ ಹೃದಯ ದೊಳಗೆ
ನಿದ್ರೆ ಬರದು ವಿರಹದಲಿ ಒಂದು ಗಳಿಗೆ
ಸಿಂಗಾರ ಗೊಳ್ಳದಿರು ಇಷ್ಟು ಕೃಷ್ಣ
ಲೋಕದ ದೃಷ್ಟಿ ತಾಕಿ ಯಾತು
ಕಾಲ್ಗಳ ಗೆಜ್ಜೆ ಸದ್ದಿಗೆ ಮೆಲ್ಲ ಮೆಲ್ಲಗೆ
ಒಲವು ಲಗ್ಗೆ ಇಟ್ಟಿತು ಎದೆಯ ಒಳಗೆ
ಕೊರಳ ರಾಗದ ಮೋಹನ ನಾದಕೆ
ಕರಗಿ ಹೋಗ್ವಳು ಗೋಗುಲ ಬಾಲಿಕೆ
ಸಿಂಗಾರ ಗೊಳ್ಳದಿರು ಇಷ್ಟು ಕೃಷ್ಣ
ಲೋಕದ ದೃಷ್ಟಿ ತಾಕಿ ಯಾತು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ