ನಲ್ಲ ನನ್ನ ನಲ್ಲ ಎಂದು ಕಾಣುವೆನೋ ನಾನು ನಿನ್ನ
ನಡು ನಡುವೆ ರಾತ್ರಿ ಯಲಿ ಬೆಚ್ಚಿ ಬೀಳುವೆ ನೆನಪಲ್ಲಿ
ತವಕ ತವಕ ನಿನ್ನ ಕಣ್ಣ ತುಂಬಾ ಕಾಣುವ ತನಕ ಬರಲೇನು ಹುಡುಕಿ ನಿನ್ನ ,ಅಡೆ ತಡೆಗಳ ದೂಡಲೆ ಇನ್ನ
ಕಳೆದ ಸುಂದರ ಸಮಯ ಹೇಗೆ ಮರೆಯಲೊ ಗೆಳೆಯ
ಒಂದೇ ಆ ಕ್ಷಣವೂ ತುಂಬಿದೆ ನೀನೇ ಕಣ ಕಣವು
ಕಲ್ಲಿನಂತೆ ಕರಗದ ವಸ್ತು ,ನಿಂತೆ ಆವರಿಸಿ ಮಸ್ತಕವು
ಬಿಡಲೊಲ್ಲದು ಕಾಡುತಿರಲು ನಿನ್ನ ಬಗೆಗಿನ ವಿರಹವು
ನೀನು ಅಲ್ಲೇ ದೋರದ ಊರಿನಲಿ ನಿಂತು ನಗುವೆ
ನಿನ್ನ ನಗುವ ಕಾಣುತಲಿ ನನ್ನ ನಾನು ಮರೆವೆ
ಬಾನಿನ ಚೆಂದಿರನ ಮೊಗವ ಕಾಣಲು ಚೆಂದ
ಹೋಲಿಸಲು ಸಾಲದು ಮೋಹನ ನಿನ್ನ ಅಂದ
ಸೊರಗಿ ಹೋಗುವ ಮುನ್ನ, ಬರಸೆಳೆದು ಅಪ್ಪು ನನ್ನ
ಒಂದು ಸಣ್ಣ ನೆಪವೊಡ್ಡಿ ಕರೆದು ಬಿಡ ಬಾರದೆ
ಮೊಗ್ಗು ಅರಳುವಂತೆ ಅರಳುವಳು ಈ ಮುಗುದೆ
ಗೆಲುವಿನ ರುಚಿಯ ತೋರಿ ಬಿಡು,ಪ್ರೀತಿಗೆ ಇರದು ಕಾಯಿದೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ