ಶುಕ್ರವಾರ, ಜೂನ್ 11, 2021

ಬರೀ ಮೌನ

 ಮನಸು ಮೌನವಾಯ್ತು 

ಕನಸು ಮುದುರಿ ಹೋಯ್ತು 

ನೀ ಬರದಿರೆ ಹತ್ತಿರ 

ಎದೆ ಏಕೊ ಬಲು ಭಾರ 


ನಿನಗಾಗಿ ಕಾದು ಕುಳಿತೆ 

ನೀನೆಲ್ಲೂ ಏಕೆ ಕಾಣದಾದೆ 

ಆಗಸದ ಚುಕ್ಕಿಗಳು ನಕ್ಕಂತಾಯಿತು 

ಮುನಿಸೆಲ್ಲವು ಕಣ್ಣ ಹನಿಯಾಯಿತು 


ಹೆಜ್ಜೆ ಗೊಂದು ಪಾದ ಸವಿದರೆ ದಾರಿ 

ಮನಸಿಗೊಂದು ಪ್ರೀತಿ ನೆಮ್ಮದಿ

ನಡಿಗೆಗಂತೂ ಅಂತ್ಯ ಕಾಣದು 

ನೊಂದ ಎದೆಗೆ ಒಲುಮೆಯೆ ಸಿಂಚನ 


ಬಿಡಿಸಿಟ್ಟೆ ಹೃದಯ ಪುಸ್ತಕ ನಿನ್ನೆದುರು 

ನಂಬಿಕೆಯ ಸಹಿ ಹಾಕಬೇಕಿದೆ 

ಮಡಿಚಿಟ್ಟ ಭಾವನೆಗಳ ಹರಡಿದೆ

ಸೊರಗದೆ ಕಾಯ್ದುಕೊ ಬಿಡದೆ 


ಸುರಭಿ ಲತಾ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...