#samyojane
#bavageethegalu
ನೂರು ನೆನಪುಗಳು ಎದೆಯ ಚಿಪ್ಪಿನೊಳಗೆ
ಪುಟಿಯುತಿರಲು ಕನಸಿನ ಲೋಕದೊಳಗೆ
ಲಗು ಬಗೆಯಿಂದಲಿ ಅಣಿಯಾಗಿದೆ ಒಡಲು
ಕಾಣುವ ತವಕ ತಡೆಯದು ನಯನಗಳು
ಅತ್ತ ಇತ್ತ ಸುತ್ತ ಎಂತಹುದೋ ಸುವಾಸನೆ
ಘಮಿಸಿದಂತೆ ಮಲ್ಲಿಗೆಯ ಪರಿಮಳದಂತೆ
ಒಲುಮೆಯ ಮೊಗ್ಗು ಹೂವಾಗುವ ಸಮಯ
ಬಳಿ ಬಂದು ಬಾಚಿ ತಬ್ಬಿದಾಗ ನನ್ನಿನಿಯ
ದುಂಬಿಗಳ ಆ ತೃಪ್ತ ನಗೆಯ ಝೇಂಕಾರ
ರತಿ ಮನ್ಮಥರ ಮಿಲನ, ಪ್ರೇಮ ಶೃಂಗಾರ
ಮಧುರವಿದೋ ಮೋಳಗಿದ ಮೋಹ ಗೀತೆ
ಇದುವೇ ಪ್ರೇಮಿಗಳ ರಸಿಕತೆಯ ಕವಿತೆ
ಆಗು ಹೋಗುಗಳ ಅರಿವಿರದು
ದುಃಖ ದುಮ್ಮಾನದ ಭಯವಿರದು
ಒಂದು ದಿನದ ಬದುಕಿನ ಹೂವ ಜೀವ
ತಣಿಸುವುದಿಲ್ಲವೇ ಎಲ್ಲಾ ಮನುಸುಗಳ
ಕೃಷ್ಣನ ಒಲುಮೆ ಇರಲು ಮತ್ತೇಕೀ ಅಳಲು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ