ಹೇಳದೆ ಮೌನ ವಹಿಸಿದೆ ಚೆನ್ನ
ಕೇಳದೇ ಅರಿತು ಬಿಟ್ಟೆಯ ನನ್ನ
ಮಾತುಗಳು ಬೇಕಿಲ್ಲ ನಮ್ಮಿಬ್ಬರಲಿ
ಹೃದಯ ಬಡಿತ ಸಾಕಲ್ಲವೆ
ನೋವುಗಳು ಹಲವು ಬಗೆಯಲಿ
ಹಂಚಿಕೊಳ್ಳಲಾರೆನು ಎಲ್ಲರಲಿ
ಸಂತಸ ಕೊಡಬಯಸುವೆ
ದುಃಖ ವಿರಲಿ ನನ್ನೆದೆಯಲಿ
ನೊಂದಾಗ ಬರುವೆಯಲ್ಲ ಬಿರುಗಾಳಿಯಂತೆ
ಶಕ್ತಿ ತುಂಬುವ ದೇವನಂತೆ
ನೀನಿರಲು ಜೊತೆಯಲಿ ನನಗೇಕೆ ಚಿಂತೆ
ದೇಹವೆರಡು ಆತ್ಮ ಒಂದಂತೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ