ಬೆಚ್ಚಿ ಬೀಳಬೇಡ ಇನಿಯ
ಹಚ್ಚಿ ಕೊಂಡು ಬಿಟ್ಟೆ ನಿನ್ನ
ನೋಡದಿರು ಬೇರೆ ಹೆಣ್ಣ
ನೆನೆಸದಿರು ನನ್ನ ಕಣ್ಣ
ಮುಂದೆ ಹೇಳದೆ ನಾಚಿರುವೆ
ಅರಿಯದಿರಲು ನೊಂದಿರುವೆ
ಪದಗಳಲಿ ಹೇಳಲಾಗದೆ
ಕವಿತೆಯಲ್ಲಿ ಬರೆದಿರುವೆ
ಮರೆಯಲಿ ನಿಂತು ಮೋಹಿಸಿದೆ
ಮನದಲ್ಲಿ ನೀನೇ ಆವರಿಸಿದೆ
ಮಧುವಾಗಿಸು ಬಾ ಬಾಳನ್ನು
ನನಗಾಗಿ ತೆಗೆದಿರಿಸು ತೋಳನ್ನು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ