ಭಾನುವಾರ, ಜೂನ್ 27, 2021

 ಶಿವ ಶಿವ ನಾಮದಲಿ ಮರೆತೆ ನೋವ 

ಹರ ಹರ ಎನುತಲಿ ಕಳೆದೆ ದಿನವ 


ಬೇಡಿಹೆನು ನಿನ್ನ ಮನದಿಂದ 

ನೊಂದಿಹುದು ಮನ ಬದುಕಿಂದ 

ಸಕಲ ಚರಾಚರದಲಿ ನೀ ನೆಲೆಸಿರುವೆ 

ಬಕುತಿಯಲಿ ನಿನ್ನ ನಂಬಿ ಬಂದಿರುವೆ 


ವ್ರಥ ಉಪವಾಸ ಮಾಡಲು ಶಕ್ತಿ ಇಲ್ಲ 

ಅನ್ಯರೆದರು ಕೈ ಚಾಚುವ ಮನಸ್ಸಿಲ್ಲ 

ಒಳಗೊಳಗೆ ನೂರು ಪರಿ ತಾಪಗಳು 

 ಆಗಿದೆ ಬದುಕು ಭಯದ ದಿನಗಳು 


ನೆಮ್ಮದಿ ಯೊಂದೇ ನಿನ್ನ ನಾಮವು 

ಪೂಜಿಸಲು ನಯನವು  ನೆನೆದವು 

ಶಿವ ನೆಂದರೆ ಕರುಣೆಯ ಕಡಲು 

ನೆನಪಿಸುವುದು ತಾಯಿಯ ಮಡಿಲು 


ಶಿವ ಶಿವ ನಾಮದಲಿ ಮರೆತೆ ನೋವ 

ಹರ ಹರ ಎನುತಲಿ ಕಳೆದೆ ದಿನವ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...