ಸಾಕು ಮಾಡು ಈ ಮೌನ
ಬೇಡಿದೆ ಮಾಧವ ನನ್ನೀ ಮನ
ಸಾವು ಬದುಕಿನ ಹೋರಾಟ
ಅಂತ್ಯ ಗೊಳಿಸು ಈ ಕಾದಾಟ
ದುಷ್ಟ ತನವು ರಾರಾಜಿಸುತಿದೆ
ಮುಗ್ದ ಮನಗಳು ನೊಂದಿದೆ
ದೇವನಿರುವ ನಂಬಿಕೆಯನು
ಬಿಡದೆ ಪೂಜಿಸುವ ಭಕ್ತನನು
ಅಲ್ಲ ಗೆಳೆದು ಅವಮಾನಿಸುತಿಹರು
ಚೋರನೆಂಬ ಬಿರುದು ಕೊಟ್ಟಿಹರು
ಹಣದ ಆಸೆಗೆ ಮನುಜತನ ಮರೆತು
ಕಡು ಬಡವರ ಕಾಲ ಕಸದಂತೆ ಕಂಡರು
ಕನಿಕರ ಬರದೆ ನಗುವೆಯಾ ಕೂತು
ಮೌನ ಸರಿಸಿ ಹರೆಸೆಯಾ ಬಳಿ ಬಂದು
ಕೈಯ್ಯ ಹಿಡಿದು ಸಂತೈಸಬಾರದೇ ಮುಕುಂದ
ಮನವು ಸಂತಸ ಗೊಳ್ಳಲಿ ನಿನ್ನಿಂದ
ಮುನಿಸು ತೊರೆದು ಮುದದಿ ಬೆರೆತು
ಹರಿಸು ಕರುಣೆಯಲಿ ಮುಗುದೆಯ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ