ಮನೆಯ ಮುಂದೆ ತುಳಸಿಯ ಇಡಲು
ಮನವು ಆಗುವುದು ಹರುಷದ ಕಡಲು
ಮುಂಜಾನೆ ಸಂಜೆ ಹೊತ್ತಿಸಿ ದೀಪ
ಕಳೆವಳು ತಾಯಿ ಎಲ್ಲರ ಪಾಪ
ಇರಬೇಕು ಹಸಿರು ಎಲ್ಲೆಡೆಯಲ್ಲಿ
ತಂಪು ಗಾಳಿ ಸುಳಿಬೇಕು ಒಡಲಲ್ಲಿ
ಪುದೀನ ಕೊತಂಬರಿ ಕರಿ ಬೇವು
ಇದ್ದರಂತೂ ಬಲು ಚೆಂದ ಮಾವು
ಇದ್ದಂತೆ ವಿದ್ಯುತ್ ದ್ವೀಪ ರಸ್ತೆ ಗಳಲ್ಲಿ
ನೆಡಬೇಕು ಗಿಡಗಳು ಮನೆ ಅಂಗಳದಲ್ಲಿ
ಬೀದಿ ಬೀದಿಗಳಲ್ಲಿ ಮರಗಳು
ನೋಡಲು ತಂಪಾಗುವುದು ಕಣ್ಣುಗಳು
ಪುಟ್ಟ ನಲಿವ ಮಕ್ಕಳಂತೆ
ನೆಟ್ಟ ಸಸಿಗಳು ಮನೆಯ ಕೂಸಂತೆ
ಬೆಳೆಸೋಣ ದಿನಕ್ಕೊಂದು ಸಸಿ
ಬನ್ನಿ ಸೇರಿ ಮಾಡೋನ ಕಸಿ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ