ಪ್ರಾಸ , ಪ್ರಾಸ ಕೊಡುತಿದೆ ತ್ರಾಸ
ಬೇಕಿಲ್ಲ ಅದರ ಸಹವಾಸ
ಹಾಗೇ ಬರೆಯ ಯತ್ನಿಸುವೆ ಇತಿಹಾಸ ;)
ಮನದ ಭಾವನೆಗಳಿಗೇಕೆ ಕಟ್ಟು ಪಾಡು
ಬರೆದರೆ ಸಾಲದೇ ನೀತಿ ಹಾಡು
ಹಾಡುವೆ ಮನವಿಟ್ಟು ನೀ ಕೇಳು
**************************
ಅಂಕೆ ಇರದ ಪ್ರೀತಿಗೆ
ಶೆಂಕೆ ಯಾತಕೆ
ಬಳಿ ಇರದ ಮುಖಕೆ
ಪರದೇ ಯಾತಕೆ
ಮುಚ್ಚಿಡಲು ಶ್ರೀ ಗಂಧ
ಬರದೇ ಸುಗಂಧ ?
ಬಚ್ಚಿಡಲು ನೋವು
ಸುಡುವುದು ಕಾವು
*******************
ಎತ್ತಣ ಮಾಮರ
ಎತ್ತಣ ಕೋಗಿಲೆ
ಎಲ್ಲಿಯ ಲತೆ
ಎಲ್ಲಿಯ ಕವಿತೆ
ನಿಮಗೆ ನನ್ನ ಕೃತಜ್ಞತೆ
******************
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ