ಸೋಮವಾರ, ಜೂನ್ 7, 2021

ಬಾಲ ಕೃಷ್ಣ

 ಒಂದು ದಿನ ಯೆಶೋಧ ಹಾಗು ಇತರ ಸಖಿಯರು ನದಿಯಲ್ಲಿ ಎಲೆಯ ಮೇಲೆ ದೀಪಗಳನ್ನು  ತೇಲಿ ಬಿಡುತ್ತಿದ್ದರು ..


ಎಲ್ಲರ ದೀಪಗಳೂ  ಮುಂದೆ  ಮುಂದೆ ಸಾಗುತ್ತಾ ಹೋಯಿತು ..

ಆದರೆ ಯೆಶೋಧ ಹಾಗೂ ಕೆಲವರ ದೀಪ ಮುಂದೆ ಹೋಗದೆ ಅಲ್ಲೇ ಸುತ್ತಿ ಸುತ್ತಿ  ಹಿಂದೆ  ಬರುತ್ತಿತ್ತು ..


ಏಕಿರಬಹುದು ಎಂದು ನೋಡಲು ..

ಕೃಷ್ಣ ಒಂದು ಕಡ್ಡಿಯಿಂದ ಎಲ್ಲಾ  ದೀಪಗಳನ್ನು ಹೊರಗೆ ತೆಗೆದು ಇಡುತ್ತಿದ್ದ .


ಯಶೋಧ ಕೇಳಿದಳು " ಮಗು ಕೃಷ್ಣ ಏನುಮಾಡುತ್ತಿರುವೆ ?" 


ಕೃಷ್ಣ ನೆಂದ " ಅಮ್ಮ   ದೀಪಗಳನ್ನು   ಮುಳುಗದಂತೆ ಎಲ್ಲವನ್ನೂ ಹೊರಗೆ ತೆಗೆಯುತ್ತಿದ್ದೇನೆ. ಎಂದ. 


ಯಶೋಧ " ಮಗು ಇಲ್ಲಿ    ಎಷ್ಟೋಂದು ದೀಪಗಳಿವೆ ಎಷ್ಟು ಎಂದು ತೆಗೆಯುತ್ತೀಯಾ  ಎಂದು ನಗುತ್ತಾ ಕೇಳಿದಳು . 


ಕೃಷ್ಣ " ಅಮ್ಮಾ ಎಲ್ಲವನ್ನೂ ಅಲ್ಲದಿದ್ದರೂ ನನಗೆ ಹತ್ತಿರವಿರುವ ಹಾಗೂ ಹತ್ತಿರಬರುತ್ತಿರುವ ದೀಪಗಳನ್ನು ಕಾಪಾಡಬಲ್ಲೆ ಎಂದ ತುಂಟ ನಗು ಬೀರಿದ.  


ಕೃಷ್ಣ ನ ಸದಾ ಜಪಿಸುತ್ತಾ ಅವನ ಸಂಪರ್ಕ ದಲ್ಲಿ ಇದ್ದರೆ  ಅವನೆಂದೂ ಕೈ ಬಿಡಲಾರ ..ನಮ್ಮ ನ್ನು ಭವ ಬಂದನ ಗಳಿಂದ ರಕ್ಷಿಸುವ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...