ಒಂದಷ್ಟು ದಿನ ಮಾತಾಡಿದಾಕ್ಷಣ ಅದು ಪ್ರೀತಿ ಅಲ್ಲ ಪರಿಚಯ ಅಷ್ಟೇ.
ಅಂದ ಅಲಂಕಾರ ಮಾಡಿಕೊಂಡಾಕ್ಷಣ ಅದು ಒಲಿಸುವಿಕೆ ಅಲ್ಲ ,ಅಭ್ಯಾಸ ಅಷ್ಟೇ
ಕಂಡ ತಕ್ಷಣ ಮುಗುಳು ನಗೆ ಮೂಡಿದರೆ
ಅದು ಆಕರ್ಷಣೆ ಅಲ್ಲ
ಅದು ಹಿರಿಯರು ಹೇಳಿಕೊಟ್ಟ ಗೌರವಾನ್ವಿತ ಸಭ್ಯತೆಯ ಲಕ್ಷಣ ಅಷ್ಟೇ
ಹೊಂದಾಣಿಕೆಗಳು ಇಬ್ಬರಲ್ಲೂ ಇರಬಹುದು
ಜೋಡಿ ಯಾಗಬೇಕೆಂದಿಲ್ಲ
ಪರಸ್ಪರ ವಯಸ್ಸಿನ ಭಾವನೆಗಳ ಸುಂದರ
ಗೆಳೆತನ ವಷ್ಟೆ
ಎಲ್ಲೊ ಒಮ್ಮೆ ಮನ ನೊಂದಾಗ ಎದುರಲ್ಲಿ ಕಣ್ಣ ಹನಿ ಹಾಕಬಹುದು
ಅದು ಅಸಹಾಯಕತೆ,ಅವಶ್ಯಕತೆ ಅಲ್ಲ
ಧೈರ್ಯ ತುಂಬುವ ವ್ಯಕ್ತಿ ಮೇಲಿನ ನಂಬಿಕೆ ಅಷ್ಟೇ
ಅಭಿಮಾನ ಆರು ದಿನ ವಿರಬಹುದು,ಪ್ರೀತಿ ನಾಲ್ಕು ದಿನಕ್ಕೆ ಸಾಯಬಹುದು
ಗೆಳೆತನ ಬೀಸುವ ತಂಗಾಳಿಯಂತೆ ಸದಾ
ಹಸಿರಾಗಿ ಮನಸ್ಸಿಗೆ ಹಿತವಾಗುತ್ತದೆ.
ಕಷ್ಟ ಬಂದಾಗ ಲೆಕ್ಕ ವಿಡದೆ ಹಸ್ತ ಚಾಚಿ ಬೆನ್ನ ತಟ್ಟಿದಾಗಲೆ ಮನಸ್ಸಿಗೆ ಆನಂದ
ಸದಾ ನೆರಳಂತೆ ಕಾಯ್ದು ಹದ್ದು ಮೀರದಿದ್ದಾಗಲೇ ಉಳಿಯುವುದು ಸಂಬಂಧ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ