ಸೋಮವಾರ, ಜೂನ್ 7, 2021

ಮನದ ಮಾಮರ

 #ಮನದ ಮಾಮರ#


ಮನದ ಮಾಮರ 


ಎದೆಯ ತುಂಬಾ ಹೊಸ ಕನಸು 

ಬಯಸಿದೆ ಏನನ್ನೊ ಮನಸು 

ಹುದುಗಿದ ಆಸೆಗಳ ಚಿತ್ತಾರ 

ಬೆಳೆದು ನಿಂತಿದೆ ಮಾಮರ 


ಹಸಿರೆಲೆಗಳ ನಡುವೆ ಹೂವು 

ಹೂವ ನಡು ನಡುವೆ ಮಾವು 

ರುಚಿಯ ಸವಿಯುವ ಸರಧಾರ 

ಬರುವ ನೆಂದು ಕಾದಿದೆ ಮಾಮರ 


ಮಾಗಿದ ಹಣ್ಣು ದೇವನಿಗೆ ಅರ್ಪಿತ 

ಬೆಳೆದು ನಿಂತ ಹೆಣ್ಣು ಬಾಯಿಗೆ ಚರ್ಚಿತ 

ಒಪ್ಪ ಓರಣವಾಗ ಬೇಕು ಕೃಷ್ಣನ ಪಾದುಕೆಗೆ 

ಮೆಚ್ಚಿ ನಡೆಯ ಬೇಕು ಹೆಣ್ಣು ಇನಿಯನಿಗೆ 


ಮಮತೆ ಬಳ್ಳಿ ಹರಡುತಲಿ ತನುವ 

ಒಪ್ಪಿಸಲೇನು ತನ್ನತನದಿ ಚೆಲುವ 

ಕರ್ತವ್ಯ ಮೆರೆದ ಜನ್ಮ ಅಮರ  

ಹೆಣ್ಣಾಗಿ ಹಣ್ಣಾಗಿ ಬೆಳೆದಿದೆ ಮಾಮರ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...