ಶನಿವಾರ, ಜೂನ್ 5, 2021

ನೆನಪು

 #samyojane#


ಮತ್ತದೇ ಹಳೆಯ ನೆನಪಿನ ಸುರಳಿ 

ಸುತ್ತಿ ಸುತ್ತಿ ಬರುತಿದೆ ಬೆನ್ನು ಹತ್ತಿ 

ಮರೆಯುವಂತಿಲ್ಲ,ನೆನೆಯುವಂತಿಲ್ಲ 

ಬರಡಾಗಿದೆ ಕಣ್ಣೀರು ಬತ್ತಿ 


ಎದೆಯಂಗಳದಿ ಕಲೆತ ಮಧುರ ಭಾವನೆ 

ಕಲ್ಲಾಗಿಹುದು ಹೇಳದೇ ಸುಮ್ಮನೆ 

ತುಟಿಯಂಚಿನ ಕಿರುನಗೆಯು 

ಮರೆಯಲಿ ಮಿಡುಕಾಡಿದೆ ಮೆಲ್ಲನೆ 


ವಸಂತ ಕಾಲಕಿನ್ನು  ಸಮಯವಿದೆ 

ಅದರೊಳಗೆ ಎದೆಕುಂದುವ ಭಯವಿದೆ 

ನೋವುಗಳ ಸರಮಾಲೆ ಸರಿದಂತಿದೆ 

ಹೊಂಬೆಳಕಲಿ ಒಡಲು ಮೀಯಬೇಕಿದೆ 


ಕರೆಯಲೇ ಕಳೆದು ಹೋದ ಸಂತಸ 

ನಲಿಯುವುದೆಂದು ನನ್ನ ಮನಸ( ಸು)

ಕಾತರದಿ ಕಾದಿಹುದು ಕಣ್ಣು ಗಳು 

ಮರೆತು ನಲಿಯಬೇಕಿದೆ  ಪಾದಗಳು 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...