#samyojane#
ಹೆಸರು ಬೇರೆ ಯಾದರೇನು
ಉಸಿರು ಕೊಟ್ಟ ಮಾತೆ ನೀನು
ಮಧುರ ನುಡಿಗಳಿಂದ ಹಾಡಿ
ಪ್ರೀತಿಯಿಂದಲಿ ಮುದ್ದು ಮಾಡಿ
ಮಡಿಲಲಿ ಮಲಗಿಸಿದ ತಾಯಿ
ಕಾಣುವ ದೇವತೆ ನೀನು ಮಾಯಿ
ನೂರು ನೋವ ಮರೆಸಿ ನನ್ನ
ಮೆರೆಸಿದವಳು,ಮರೆವೆನೇನು ನಿನ್ನ
ಕರೆ ಕರೆದರೂ ಬರದ ಮಾಧವನ
ನಿನ್ನ ಕಣ್ಣಲ್ಲೆ ಕಂಡೆ ಕೇಶವನ
ತಾಯಿಗಿಂತ ದೇವ ಬೇರೆ ಇಲ್ಲ
ಸಂತಸ ನಿನ್ನ ನೆನದಾಗಲೆಲ್ಲ
ಜನ್ಯ ಜನ್ಮಕು ತಾಯಿ ಮಮತೆ
ನೀಗಿಸುವುದಲ್ಲವೆ ಎಲ್ಲಾ ಕೊರತೆ
ಕೊರಗು ಒಂದು ತಾಯಿ ನನಗೆ
ಖುಣವ ತೀರಿಸಲಿ ಹೇಗೆ ನಿನಗೆ
ನಿನ್ನೊಲುಮೆಯ ಸಿಹಿ ಜೇನಿಗೆ
ಹೊದಿಕೆ ಹಾಕಲೇ ಬಾನಿಗೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ