ಬಿಟ್ಟು ಹೋಗುವ ಮುನ್ನ
ಜಗಳದಲ್ಲಿ ಮರೆತೆ ಏಕೆ ನನ್ನ
ಎಲ್ಲರೂ ಆಚರಿಸುವರು ಅಪ್ಪನ ದಿವಸ
ನಾ ಕಾಣುತಿರುವೆ ನಿನ್ನ ಕನಸ
ಅಪ್ಪಾ ಎಂದು ಕರೆಯಲಿ ಯಾರನ್ನ
ತಬ್ಬುವರಿಲ್ಲ ತೋಳನ್ನ
ಬೇಕಾಗಿದೆ ನಿನ್ನ ಪ್ರೀತಿ ಮಾತು
ಅಳುತಿಹಳು ಅಮ್ಮ ಕೂತು
ಬರಬಾರದೇ ಪಪ್ಪ
ಕೊಡಬಾರದೇ ಒಂದು ಉಪ್ಪಾ ( ಮುತ್ತು)
ನಿನಗಾಗಿ ಕಾದಿರಿಸಿರುವೆ ಹಣ್ಣುಗಳು
ಅತ್ತು ಊದಿಕೊಂಡಿದೆ ನನ್ನ ಕಣ್ಣುಗಳು
ದಯಮಾಡಿ ಬಂದು ಬಿಡು
ಒಮ್ಮೆ ನನ್ನ ತಬ್ಬಿಬಿಡು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ