ಸೋಮವಾರ, ಜೂನ್ 28, 2021

ಕೋಪ

 ಅತ್ತಿತ್ತ ನೋಡುತಲಿ 

ಹೊಗಳಿಕೆಯ ಕೇಳುತಲಿ 

ನಿನ್ನದೇ ಪ್ರಪಚದಲಿ ನೀನಿರುವೆ

ನಿನ್ನ ಗೆಳೆತನ ಮಾಡಿ ನೊಂದಿರುವೆ 

ಅಟ್ಟಕ್ಕೆ ಏರಿಸುವರು ನಾಲ್ಕು ದಿನ 

ತಲೆ ಕೆಳಗಾಗಿಸುವರು ಒಂದು ದಿನ 


ಪ್ರೀತಿಯನು ಕೊಟ್ಟು ಮರೆತೆ ನೀನು 

ನೆನಪಾಗಿ ಕೂಗಲು ಆಲಿಸೆ ಏನು? 

ಒಳಿತು ಬಯಸುವ ಮನವ 

ತೊರೆಯುವುದು ಸರಿಯ 

ಬೇಸರ ವೇಕೊ ನನ್ನೊಡೆಯ 

ಕಾದಿದೆ ಕೇಳೊ ನನ್ನ ಹೃದಯ 


ಕೋಪ ತಾಪ ಬರುವುದು ಸಹಜ 

ಹುಟ್ಟು ಗುಣದಲಿ ಬಿದ್ದ ಮನುಜ 

ಬಾಳಬೇಕು ಅಲ್ಲವೇ ಅದರೊಟ್ಟಿಗೆ 

ನಗಬೆಕು ಮೆಲ್ಲಗೆ ನೋವ ಜೊತೆಗೆ 

ದೂರದಲಿ ನೀನಿರಲು,ನೆನಪಿದು ಕಾಡಿರಲು 

ಕೆಟ್ಟ ಸಮಯವದು ಮರೆತು ಬಿಡು 


ಬಾ ಬಾರೊ ಬಾರೊ ಒಲವನೊಮ್ಮೆ ಕೊಡೊ 

ಎಣೆಯುವ ಜೊತೆಯಾಗಿ ಜೇನು ಗೂಡು 


ಸುರಭಿ ಲತಾ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...