ಭಾನುವಾರ, ಜೂನ್ 27, 2021

 ಇಂದೇನಾಯಿತು 

ನನ್ನ ಅಂದವೇ ನನ್ನ ಕಣ್ಣು ಚುಚ್ಚಿತು 


ತೊಟ್ಟ ಉಡುಗೆ ಬಿಗಿಯಾಯಿತು 

ಇಂದೇಕೋ ಕೆನ್ನೆ ಕೆಂಪಾಯಿತು 


ನನ್ನ ಕಣ್ಣು ಗಳು ನಿನ್ನ ಅರೆಸುತ್ತಿತ್ತು 

ನನ್ನ ಮನ ನೀ ಬರುವ ದಾರಿ 

ಕಾಯುತ್ತಿತ್ತು 


ನನ್ದಧರಗಳು ನಿನ್ನ ಹೆಸರೇ 

ಜಪಿಸುತ್ತಿತ್ತು 


ನೀ ಬಂದು ನನ್ನ ಕದ್ದಾಗಿತ್ತು 

ಮೊಗ್ಗರಳಿ ಹೂ ವಾಗಿತ್ತು 


ನಿನ್ನ ಮತ್ತಿನಲ್ಲೇ 

ನಾ ತೇಲುವಂತಾಯಿತು 


ಇದೆಲ್ಲವೂ ಕನಸಿನಂತೆ 

ಭಾಸವಾಯಿತು.


ಆದರೆ ನೀ ಇತ್ತ   ಮುತ್ತಿನ 

ಕಲೆ ನಿಜವೆಂದು ಸಾಬಿತು ಪಡಿಸಿತು 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...