ಶನಿವಾರ, ಜೂನ್ 5, 2021

ಕೆಂದಾವರೆ

 ಬೇಕಿಲ್ಲ ನಾ ನಿನಗೆ 

ನೆಪದ ಮಾತೇಕೆ 

ಕಾಯುವಿಕೆ ನನಗೇನೂ 

ಹೊಸದಲ್ಲ . 

ನಿನ್ನಿಂದ ನೋಯುವುದೂ 

ತಪ್ಪಿಲ್ಲ 

ಆದರು ಈ ಹಾಳು ಮನಸು 

ಮಾತು ಹೇಳುತ್ತಿಲ್ಲ 


ಸಾವಿರ  ಹೂಗಳ ಮದ್ಯೆ 

ಕೆಂದಾವರೆಯೇ ನನಗಿಷ್ಟ 


ನೂರಾರು ಬಣ್ಣ ಗಳಿದ್ದರೂ 

ಬಿಳಿಯ ಬಣ್ಣದ ಮೇಲೇ ಒಲವು 


ಈ ಬಯಕೆಗಳೇ ವಿಚಿತ್ರ 

ಆ ಕೃಷ್ಣ ನೆಂದ ಮೋಹಬಿಡು ..

ಕಾಮಬಿಡು ,ಆಸೆ ಬಿಡು , 

ಎಲ್ಲಾ ಬಿಡುವನೇನೋ ನಾನು 

ಆದರೆ 

ಹೆಬ್ಬಾವು ಬಳಸಿದಂತೆ 

ಬಂದಿಸಿದೆಯಲ್ಲಾ ನೀನು , ನಿನ್ನ ನೆನಪು , ಹೇ ಹುಡುಗ ಮರೆಯಲಿ ಹೇಗೋ ನಾನು ?


ನೋವಲ್ಲೂ ಹಿತಕಾಣುವ ಚಟ 

ರೂಡಿಸಿಕೊಂಡ ಈ ಮನವನ್ನು 

ದಾರಿಗೆ ತರುವುದು ಹೆಗೋ ?? 


ಮರೆಯಲು ಯತ್ನಿಸಿದಾಗಲೆಲ್ಲಾ 

ಹುಚ್ಚು ,ಹೆಚ್ಚಾಗಿ ಬಡ ಬಡಿಸಿದೆ 

ನಿನ್ನ ಹೆಸರನ್ನೇ ..


ಆಗದು ಕಣೊ , ವ್ಯರ್ಥ ಪಯತ್ನ 

ಪಟ್ಟು ..ಸಾವೇ ಪ್ರಿಯವಾಯಿತು 

ನೀನೋ ಕಲೆಗಾರ , ಇಂಚಿಂಚೂ 

ನನ್ನ ಮನ ಕದ್ದ ಚೋರ , 

ಅದೇನು ಸುಖವೋ ಕಾಣೆ 

ಈ ವಿರಹದಲ್ಲಿ 


ನನಗೂ ಗೊತ್ತು ಇದೇ ಭಾವ ನಿನ್ನಲ್ಲೂ  ಇದೆ 

ನಿನ್ನ ಅಸಹಾಯಕತೆ ಕಂಡೆ 

ಮನದಲ್ಲೇ 


ಬೀಸುವ ತಂಗಾಳಿಯಲ್ಲಿ ನೀ ಬಿಟ್ಟ 

ನಿಟ್ಟುಸಿರೇ 

ಸೋಕಿತು  ನನ್ನೆದೆ ..ಆಗಲೇ ನಾ ನಿನ್ನ 

ಅರಿತೆ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...