ಶನಿವಾರ, ಜೂನ್ 19, 2021

 ಎತ್ತರೆತ್ತರಕೆ ಬೆಳೆದಂತೆ ಕನಸು ..!

ಚಿಕ್ಕದಾಗುವುದೇ ಮನಸು !

ಗುರಿ ಮುಟ್ಟಿ ಹೆಸರು ಗಳಿಸಿ ...

ಸಣ್ಣ ತನವ ತೋರುವುದೇಕೊ ?!!

ಬೆಳೆಯುವ ಕುಡಿಯ ಚಿವುಟುವುದೇಕೊ !?


ನಾನು ನಾನೇ ಎಂಬ ಅಹಂ ಭಾವ !

ಶ್ರೇಷ್ಠ ವೆಂಬುವ ಮನೋಭಾವ !!

ದೊಡ್ಡ ತನವ ಮರೆಸುವುದು !

ಕೀಳುತನವ ತೋರುವುದು !

ಸಲ್ಲದು ಅಪಜಯವ ತರುವುದು ! 


ಎಲ್ಲರಲ್ಲೊಂದಾಗಿ ತ್ಯಾಗಿ ನೀ ಆಗಿ !

ಒಳಿತು ಬಯಸುವೆಯಾದರೆ ನೀನು !

ಕಾಣ್ವರು ಎಲ್ಲರೂ ಕಂಡಂತೆ ಬಾನು !

ಮುಗಿಲಲಿ ಬೆಳ್ಳಿ ಚುಕ್ಕೆ ಹೊಳೆವುದೇತಕೆ ! 

ಅಲ್ಲ ಗೆಳೆದು ನೋವ ಕೊಡದಿರು ಮನಕೆ !


ಹಿರಿಯ ಕಿರಿಯರಿಲ್ಲ ಜಗದೊಳು !

ದೇವ ಕೊಟ್ಟ ವರವಿದು ಕೇಳು !

ಮುನಿದು  ಕಣ್ಣು ಬಿಟ್ಟರೊಮ್ಮೆ !

ತಲೆ ಗೆಳಗಾಗುವುದು ಜಗವೆಲ್ಲಾ !

ಮಣ್ಣ ಸೇರುವುದು ತಪ್ಪುವುದಿಲ್ಲ !


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...