ಸೋಮವಾರ, ಜೂನ್ 14, 2021

ಯಮನಿಗೊಂದು ಪ್ರಶ್ನೆ

 ದಣಿದಿಲ್ಲವೇ ಯಮರಾಜ ನೀನು 

ಹೊತ್ತು ಕೊಂಡು ಹೋಗುತಿಹೆ 

ಅತ್ತು ಸೊರಗಿಹ ಜೀವಗಳ 

ಬತ್ತಿ ಹೋಗುತಿದೆ ಕಣ್ಣೀರು 


ಮೆತ್ತಗಿನ ಮನಸಿನ ಕೂಸುಗಳು 

ಹತ್ತು ಜನರ ಒಲವ ಗೆದ್ದವರು 

ಒಳಿತು ಮಾಡುವವರಿಗೆಂತ ನೋವು 

ಹಾವಂತ ಜನರಿಗೆ ಆಯುಸ್ಸು 


ಕಲಿಯುಗವು ಕರ್ಮಗಳ ಕಾಂಡವು 

ಕರಗಿ ಹೋಗುತಿದೆ ಕರುಣೆಯು 

ಎತ್ತ ಸಾಗುತಿದೆ ಪಯಣವು 

ಬದುಕೊಂದು ವಿಚಿತ್ರದ ತಾಣವು 


ಇನ್ನೆಷ್ಟು ಹೊರಬೇಕಿದೆ ಭಾರವು 

ರಜೆ ಬೇಡವೆ ಸಾವಿನ ಮೆರವಣಿಗೆಗೆ 

ಕರಗಲಿಲ್ಲವೇ ಶಾಹಿ ಬ್ರಹ್ಮ ದೇವ 

ದಣಿಯಲಿಲ್ಲವೇ ಹೊತ್ತು ಯಮ ದೇವ 


ಬರಿದಾಗಿ ಹೋಗುತಿದೆ ಭೂ ಲೋಕ 

ಒಳಿತೆಂಬುದೆ ಕರಗಿ ಹೋಗುವ ಭಯವು 

ಉಳಿದವರು ಸ್ವಾರ್ಥಕೆ ಬಲಿಯಾದವರು 

ಬದುಕುವುದೆಂತು ಮುಂದೆ ದಾರಿ ಕಾಣೆವು 


ಸುರಭಿ ಲತಾ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...