ಶುಕ್ರವಾರ, ಜೂನ್ 11, 2021

ನಮ್ಮವರು ಇವರು

 ನಮ್ಮವರೇ ಇವರು ನಮ್ಮವರೇ !? 


ನಾಡು ನುಡಿಗಾಗಿ ಹೋರಾಡುತಿಹರು ಇಲ್ಲಿ 

ನಮ್ಮ ನಾಡಿನಲ್ಲೇ ಪರ ಭಾಷೆಯ ಆಡುವರು ಅಲ್ಲಲ್ಲಿ  

ನಮ್ಮವರೇ ಇವರು ನಮ್ಮವರೇ...


ಕೆಚ್ಚೆದೆಯ ಕಣ್ಮಣಿಗಳು ಸ್ವಾಭಿಮಾನವ ಬಿಡಲೊಲ್ಲರು 

ಪರ ಭಾಷೆಯ ಸಿನಿಮಾ ಗೆ ಜೈ ಎಂದರು ಕೆಲವರು 

ನಮ್ಮವರೇ ಇವರು ನಮ್ಮವರೇ...


ನೀರಿಗಾಗಿ ಹೋರಾಟ ರೈತರ ಪರದಾಟ 

ಸಂಬಂಧ ವಿಲ್ಲದಂತೆ ಕೂತು ನಗುವರು 

ನಮ್ಮವರೇ ಇವರು ನಮ್ಮವರೇ...


ಊಟ ವಸತಿ ಕೆಲಸ ವಿಲ್ಲಿ ಅರಸಿ ಬಂದರು 

ಇಟ್ಟ ಒಡಲಿಗೆ ಕೊಳ್ಳಿ ಇಟ್ಟು ತಮ್ಮ ತನವ ಮೆರೆದರು 

ನಮ್ಮವರೇ..ಇವರು ನಮ್ಮವರೇ !? 


ಹುಟ್ಟಿದ್ದು ಇಲ್ಲಿ ಮೆರೆದರು ಅಲ್ಲಿ 

ಬೆಳೆಸಿದ ತಾಯಾದರೇನು ಹೆತ್ತ ತಾಯಿಯ ಮರೆತರು 

ನಮ್ಮ ವರೇ ಇವರು ನಮ್ಮವರೇ....


ಬೇಕೆಂದಾಗ ಬಲು ಒಲವಿನ ನುಡಿ 

ಬೇಡದಾಗ ಹಾಕುವರು ಕಿಚ್ಚಿನ ಕಿಡಿ 

ನಮ್ಮ ವರೇ ಇವರು ನಮ್ಮವರೇ...


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...