ಒಳ ಬರಲು,ಹೊರ ಹೋಗಲು ಬಾಗಿಲು ಇರದ ಮನೆಯ ಒಡತಿ ನಾನೆಂದು
ಬಂದು ಹೋಗುವ ಜನರ ಕಾಣುವೆನಾದರೂ
ಕರೆದು ಕೂರಿಸಿ ಇಲ್ಲ ಸಲ್ಲದ ಮಾತು ಬರದು
ಅರಿವೇ ಇಲ್ಲದೆ ಬೀಸುವ ತಂಗಾಳಿ ಹಿತವಾಯಿತು,ಒಂಟಿಯಾಗಿ ಕೂರಲು ಮನಸಾಯಿತು,ಮಂಜಿನ ತೆರೆಯಲಿ ಮುಸುಕಾದ ಆ ಮೊಗವು ಚೆಂದವೆನಿಸಿತು
ನೀನು ಯಾರೊ ನಾ ನಂತು ಅರಿಯೆ ನಿನ್ನ ಗುಣವೆಂತದ್ದೊ ,ನಿನ್ನ ಸ್ವಭಾವ ವೆಂತದ್ದೊ ದೂರದಿ ಕುಳಿತು ಕುಶಲೋಪರಿ ಕೇಳಿದಾಗ
ಸಣ್ಣ ದೊಂದು ಮುಗುಳು ನಗೆ ತುಟಿಯಂಚಲಿ
ಮನಸ್ಸು ಗೊಂದಲವಾಗಿರುವಾಗ ಮಾಯಗಾರನಂತೆ ಅರಿತು,ನಿನ್ನ ಸಮಾಧಾನದ ಮಾತು ನೆಮ್ಮದಿ ತರಿಸಿತು ನನ್ನಲಿ
ಕಟ್ಟಿ ಕೊಂಡ ಭದ್ರ ಗೊಡೆಯಲಿ ಕಿರು ಬೆಳಕು
ಕನಸಿನ ಲೋಕದಲಿ ತೇಲುವ ಮುಂಚೆಯೇ
ಬೆಚ್ಚಿ ಬೀಳಿಸಿತು ಭಯದ ನೆರಳು
ಎಚ್ಚರಿಕೆಯ ಗಂಟೆ ಮೊಳಗಲು
ಭದ್ರ ಗೊಂಡಿತು ಅಲುಗಾಡದೆ ಪಾದಗಳು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ