ಶನಿವಾರ, ಜೂನ್ 5, 2021

ಕಾತರಿಕೆ

 ಫೇಸ್ ಬುಕ್ -- ಕಥೆ 

********** *****

ವಯಸ್ಸಾದ ಇಬ್ಬರು ಮುದುಕರು ಲ್ಯಾಪ್‌ಟಾಪ್ ಅಂಗಡಿಗೆ ಒಂದು ಹೊಸದಾದ ಲ್ಯಾಪ್‌ಟಾಪ್ ಕೊಂಡು ಕೊಳ್ಳಲು ಬಂದರು . 


ಲ್ಯಾಪ್‌ಟಾಪ್ ಕರೀದಿಸಿ ಅಲ್ಲೇ ಇಂಟರ್ನೆಟ್ ಕನೆಕ್ಷನ್ ಹಾಕಿಸಿಕೊಂಡು . ಒಬ್ಬ ಹುಡುಗನ ಬಳಿ ಬಂದರು . 


ಅವನಲ್ಲಿ ಷೇಸ್ ಬುಕ್ ಅಕೌಂಟ್ ಮಾಡಿಕೊಡಲು ಕೇಳಿಕೊಂಡರು . ಹುಡುಗ ನಗುತ್ತಲೇ ಒಪ್ಪಿಕೊಂಡ . 


ಹುಡುಗ : ಹೇಳಿ ತಾತ ಯಾವ ಹೆಸರಲ್ಲಿ ಅಕೌಂಟ್ ಮಾಡಲಿ ?? 

ತಾತ :ಯಾವುದಾದರೂ ಒಂದು ಒಳ್ಳೆಯ ಹುಡುಗಿ ಹೆಸರು ಇಡು ಮಗು . 


ಹುಡುಗ : fake  ಅಕೌಂಟಾ ?? 


ತಾತ : ಹೌದು ಮಾಡು ಹೇಳುತ್ತೇನೆ . ಹುಡುಗ : ಪ್ರೂಷೈಲ್ ನಲ್ಲಿ ಯಾವ ಫೋಟೋ ಹಾಕಲಿ ? 

ತಾತ ; ಒಳ್ಳೆಯ ಹೆಸರು ಮಾಡಿರುವ  ಚೆನ್ನಾಗಿರುವ ಒಂದು  ಹಿರೋಇನ್ ಫೋಟೋ ಹಾಕು .. 

ಈಗ ಒಳ್ಳೊಳ್ಳೆಯ ಗೆಳೆಯರಿಗೆ ಗೆಳೆತನದ ಕೋರಿಕೆ ಕಳಿಸು . 


ನಾನು  ಹೇಳಿದ  ಹೆಸರಿಗೂ ಕಳಿಸು 


ಹುಡುಗ ಹೇಳಿದಂತೆಲ್ಲಾ ಮಾಡಿ ಹೋದ ..

ಒಂದು ಫೇಸ್ ಬುಕ್ ಅಕೌಂಟ್ ರೆಡಿ ಯಾಯಿತು . 


ಹುಡುಗ ; ಈಗ ಹೇಳಿ ತಾತ ಯಾಕೆ ಈ fake  ಅಕೌಂಟ್ ?? 


ಆ ಮುದುಕರ ಕಣ್ಣಿನಿಂದ ಕಣ್ಣೀರು ಬರಲಾಯಿತು . 


ತಾತ : ನೋಡು ಕಂದ ನನಗೆ ಒಬ್ಬನೇ ಮಗ ಅವನಿಗೆ ಮದುವೆ ಯಾದೊಡನೆ ನಮ್ಮನ್ನು ದೂರ ಮಾಡಿದ ಕೇಳಿದರೆ ಅವನ ಹೆಂಡತಿಗೆ "ನೀವೆಂದರೆ ಇಷ್ಟ ಇಲ್ಲ ಅವಳಿಗೆ ಸೇವೆ ಮಾಡಲು ಸಾದ್ಯವಿಲ್ಲ ನೀವು ಇದೇ ಮನೆಯಲ್ಲಿ ಇರಿ ಎಂದು ಇಲ್ಲೇ ನಮ್ಮನ್ನು ಬಿಟ್ಟು ಹೋದ . 


ಅವನಿಗೆ ಈಗ ಎರಡು ಮಕ್ಕಳು . ಒಂದು ಗಂಡು , ಹೆಣ್ಣು .ಆ ಮೊಮ್ಮಕ್ಕಳನ್ನು ನೋಡುವ ಆಸೆ ಆದರೆ ನಾವು ಹೋಗುವಂತೆ ಇಲ್ಲ .. 


ಪೇಸ್ ಬುಕ್ ನಲ್ಲಿ  ಎಲ್ಲರೂ ಅವರವರ   ಕುಟುಂಬ ಸದಸ್ಯ ರ   ಪಟಗಳನ್ನು ಹಾಕಿರುತ್ತಾರೆ ಎಂದು ಯಾರೋ ಹೇಳಿದರು      ನಾವು   ಅಕೌಂಟ್   ತೆಗೆದರು ಯಾರು ನಮ್ಮ ನ್ನು  friend ಮಾಡಿಕೊಳ್ಳುವುದಿಲ್ಲ .


 ಹಾಗಾಗಿ  ಬೇರೆ ಹೆಸರಿನಲ್ಲಿ   ಮಾಡಿದರೆ 

ಮಗ ಮೊಮ್ಮಕ್ಕಳು  friend  ಮಾಡಿಕೊಳ್ಳುತ್ತಾರೆ  . ಆಗ ಅವರ ಫೋಟೋ  ನೋಡಿಯಾದರೂ ಸಂತಸ ಕೊಳ್ಳಬಹುದು   ಎಂದು ಅಷ್ಟೇ   ಮಗು . 


ಎಂದು ಕಣ್ಣೀರು ಸುರಿಸಿದರು .. ಅವರ ನೋವು ನೋಡಿ  ಆ ಹುಡುಗನ  ಮನ   ಕರಗಿತು  ತಾನು ಅವರಿಗೆ  friend ಆದ . 


ಸುರಭಿ ಲತಾ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...