ಹನಿ ಕವನಗಳು ಆಣಿ-
ಮುತ್ತಾಗಿ ಸೇರಲು ಕಾದಿದೆ
ನಿನ್ನ ಪಾದ ದಡಿಯಲ್ಲಿ
ಬರೆಯಲು ಕೂತ ಸಮಯದಲ್ಲಿ
ಕಾಣದಾದೆ ಜಗವಿಲ್ಲಿ , ನೀನೇ
ಕಂಡೆ ನನ್ನೆದುರಲ್ಲಿ
ಏಕೆ ಕೊಟ್ಟೆಯೋ ಈ ಹುಟ್ಟು
ಕಲಿಯುಗದಲ್ಲಿ
ನಾ ಇರಬೇಕಾಗಿತ್ತು ನೀ ಇದ್ದ
ಗೋಕುಲದಲ್ಲಿ
ಅರಿತೆ ಸಖಿಯರ ನೋವು
ಅಂದು, ಅದೇ ಭಾವದಲ್ಲಿರುವೆ
ನಾ ಇಂದು
ಬಿಡಿಸು ಜನ್ಮಗಳ ಗಂಟು
ಬೆಳೆಸು ನಿನ್ನಲ್ಲಿ ನಂಟು
ಆಲಿಸು ಎನ್ನಯ ಕರೆ
ಕಾದಿಹಳು ಈ ನೀರೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ