ಮಂಗಳವಾರ, ಜೂನ್ 15, 2021

ಇನಿಯ ಒಲವು

 ಮುಗಿಲಲಿ ಕಪ್ಪು ಮೋಡ 

ಎದೆಯೊಳಗೆ ಸಣ್ಣ ದುಗುಡ 

ಪಟ ಪಟ ಹನಿ ಉದುರಿ 

ಮಳೆ ಬಂತು ಗುಡುಗು ಚೆದರಿ 


ನೆಂದು ಬಂದಾ ಇನಿಯ 

ಚಳಿಕಾಯಲು ಸನಿಹ 

ಮೊಗ್ಗರಳಿ ಹೂವಾದ ಸಮಯ 

ತಂಪು ಗೊಂಡಿತು ಹೃದಯ 


ಬಾನಲ್ಲಿ ಬಿಳಿ ಮಿಂಚು 

ಕಣ್ಣಲ್ಲಿ ಒಲವ ಸಂಚು 

ಬಿಗಿದಪ್ಪಿ ಒಡಲನು 

ಸೆಳೆದನು ಬಾಲೆಯನು 


ಸತ್ಯವ ಅರಿತೆ ನಾನಿಂದು 

ಬಯಸುವರೇಕೆ ಖುತುಕಾಲವೆಂದು 

ಬೀಸುವ ತಂಪು ಗಾಳಿಗೆ 

ಹದವಾಗುವುದು ಬಯಕೆ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...