ಶುಕ್ರವಾರ, ಜೂನ್ 18, 2021

ಮುಂಜಾನೆ

 ಇರುಳಾಯಿತು ಹಗಲಾಯಿತು 

ಹಸಿರಾಯಿತು,ಕೆಸರಾಯಿತು 

 ಓಡುತಿದೆ ಸಮಯ 


ತಿಂಗಳಾಯಿತು,ಬೆಳದಿಂಗಳಾಯಿತು

ಸಾಗುತಿದೆ ಖುತು,ಮಾಸಗಳು 

ಚಿಗುರೊಡೆದ ಹೊಸ ಸಸಿಗಳು 


ಬಾನಾಯಿತು,ಭುವಿಯಾಯಿತು 

ಮಾಡುತಿದೆ ತನ್ನಷ್ಟಕ್ಕೆ ತನ್ನ ಕೆಲಸ 

ವಿಧಿ ತೋರಿದೆ ಮಂದ ಹಾಸ 


ದಗೆಯಲಿ ದೂಳಿನಲಿ,ನಗುತಿದೆ 

ಚಿತ್ರ ವಿಚಿತ್ರ ಖಾಯಿಲೆಯ ಅಟ್ಟಹಾಸ 

ವಿಜ್ಞಾನ ಬರೆದಿದೆ ಹೊಸ ಇತಿಹಾಸ 


ನಗುವು,ಅಳುವು ಬಾನಂಗಳದಿ 

ಕಾಮನ ಬಿಲ್ಲಂತೆ,ಬಣ್ಣ ಬಣ್ಣಗಳಲಿ 

ಮೂಡುತಿರಲು ಪ್ರಕೃತಿ ಸೇರಿದಂತೆ 


ಸುರಭಿ ಲತಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

 ಮೆಹಂದಿ  ಹೆಣ್ಣಿಗೆ ಅಂದ ಅಲಂಕಾರದ ಜೊತೆ ಕೆಲವು ಹವ್ಯಾಸ ಗಳನ್ನು ರೂಡಿಸಿಕೊಂಡಿರುತ್ತಾಳೆ. ಅಂತಹಾ ಹವ್ಯಾಸಗಳಲ್ಲಿ ಮೆಹಂದಿ ಹಾಕುವುದು ಒಂದು. ಯಾವ ಹೆಣ್ಣಿಗೆ ಮೆಹಂದಿ ಇಷ್...