ಕೃಷ್ಣ ನಲ್ಲದೇ ಒಲ್ಲೆ ಬೆರೊಬ್ಬನನು
ಅವನು ನನ್ನಿನಿಯನೆಂದು ಬಲ್ಲನವನು
ಕಾತರಿಸಿದ ಮನಕೆ ಹಿತ ತಂದವನು
ಅಳಿಸಿ , ನಗಿಸಿ , ಮೋಹಿತಗೊಳಿಸುವನು
ಜಗದೊಡೆಯನಾದರೇನು , ನನ್ನವನವನು
ರಾಧೆಯ ಪ್ರೀತಿಗೆ ಬದ್ದ ಅವನು
ನನ್ನೊಳಗೆ ಮನೆ ಮಾಡಿಹನು
ಗೊಲ್ಲರ ಗೊಲ್ಲ . ಮನ ಮೋಹಿತ
ನೆನೆದೊಡನೆ ಕಣ್ಣ ಮುಂದಿರುವನು
ಮನ ತಣಿಯದು ಅವನಂದ ಕಾಣಲು
ಸಖಿಯರೊಡನೆ ಕದ್ದು ಕಾಣುವ
ತಬ್ಬಿ ಹಿಡಿಯಲು ಮಾಯವಾಗುವ
ನಿದ್ದೆ ಯಲಿ ಬಂದು ಮುದ್ದಿಸುವ
ಅವನಾಡಿದ ಸಾವಿರ ಮಾತು
ಕಿವಿಗಿಂಪಾಯಿತು. ಮನ ತಣಿಯಿತು
ತನ್ನ ಕೊಳಲನ್ನೇ ರಾಧೆ ಎಂದ
ಹಾಡುವ ರಾಗವೇ ನಾನೆಂದ
ರಾಧ . ಕೃಷ್ಣ ರೆಂದೂ ಒಂದೇ
ಜಗವು ಕಾಣದು ನಮ್ಮ ಮುಂದೆ
ಮೋಹವು ಅಂಟದು ನಮ್ಮನ್ನು
ಭಕ್ತಿ ಯ ಸುಧೆ ತಬ್ಬಿದೆ ಒಡಲನ್ನು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ