ಇವನಾರೆ ಇವನಾರೆ ಕೇಳೇ ಇನವ ಗುಣಗಾನ
ಹಾಡುತಿರೆ ನಲಿಯುತ ತಣಿಯುವುದು ಮನ
ಬಟಾಬಯಲೇ ದಿಗಂಬರನಿಗೆ ಮೈ ಬಟ್ಟೆ ಯಾಯಿತು
ಆಗಸವೇ ಅನಿಕೇತನನಿಗೆ ಇರುವ ಮನೆಯಾಯಿತು
ಅಹಿಂಸಾವಾದಿಗಳ,ತ್ಯಾಗಿಗಳ,ಜ್ಞಾನಿಗಳ
ಹೃದಯ ಮಂದಿರ ವಾಸಿ
ವೃಷಭ ದೇವ, ಸುನಂದೆಯರ ಪುತ್ರನಿವನಮ್ಮ
ಅಪ್ರತಿಮ ಸೌಂದರ್ಯ, ಸಾಮರ್ಥ್ಯ, ಮನುಕುಲಶ್ರೇಷ್ಟ ನಮ್ಮ
ಅಣ್ಣ ಭರತನೊಡನೆ ಹೋರಾಡಿ ಕ್ಷಣದಲ್ಲಿಯೇ
ಎಲ್ಲವನು ತೊರೆದು ತಪಕೆ ಹೊರಟ ತ್ಯಾಗಮಯಿ ಇವನಮ್ಮ
ಶ್ರವಣಬೆಳಗೊಳದ ವಿಂದ್ಯಾಗಿರಿಯ ಮೇಲೆ
ಚಾವುಂಡರಾಯನ ಕೆತ್ತನೆಯಲ್ಲಿ ಸೃಷ್ಟಿ ಗೊಂಡವನಿವನಮ್ಮ
ಕರಾವಳಿಯ ಸನಿಹದೊಳು,ಮಲೆನಾಡಿನ ಹೊಸ್ತಿಲಲ್ಲಿರುವ
" ಕರಿಗಲ್ಲು" ಊರಿನ ಶಿಖರದಲಿ ನಿಂತವನೇ ಇವನಮ್ಮ
ಮಹಾಮಸ್ತಕಾಭಿಷೇಕದಿ ಜನ ಮನವ ಸೆಳೆದವನು
ಭಕ್ತಿ ಮುಕ್ತಿ ಗೆ ಕಾರಣ ಕರ್ತನು ಇವನಮ್ಮ
ಇವನೇ ಇವನೇ ನಮ್ಮ ಬಾಹುಬಲಿ
ಬನ್ನಿ ಬನ್ನಿ ಕಣ್ಣರಳಿಸಿ ಕಾಣಿರೆ ಇವನ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ