ನಿಧಿರೆಗೆ ಜಾರಿದೆ ಆಗ ತಾನೆ
ಸುರಿಯಿತು ಮಳೆ ದಬ ದಬನೆ
ಸನಿಹದಲಿ ಇನಿಯನಿಲ್ಲ
ಮನವೇಕೊ ಗಾಬರಿಯಾಯಿತಲ್ಲ
ಸುತ್ತ ಮುತ್ತಲೂ ಕತ್ತಲು
ಕಂಡ ಆಕೃತಿಯು ಅರೆ ಬೆತ್ತಲು
ಹೆಸರ ಹಿಡಿದು ಕರೆಯಲೆ
ನಡುಗಿದೆ ಅಜ್ಜಿಯ ಕತೆ ನೆನಪಾಗುತಲೆ
ಹಿಡಿದು ನಡೆದೆ ದೊಣ್ಣೆ ಕೋಲು ಕೈಯಲಿ
ಬೆವರಿಳಿಯಿತು ಚಳಿಯಲ್ಲೂ ಮೈಯಲಿ
ಸುರುಳಿ ಸುತ್ತಿ ಹಾರುತ್ತಿತ್ತು ಸಣ್ಣ ಹೊಗೆ
ಸಿಗರೇಟಿನ ವಾಸನೆ ಬಡಿಯಿತು ಮೂಗಿಗೆ
ಏಟು ಬೀಳುವ ಮೊದಲೆ ತಿರುಗಿತು ಆಕೃತಿ
ದೊಣ್ಣೆ ಹಿಡಿದ ಬೆರಳಾಯಿತು ಜಾಗೃತಿ
ಬೆದರಿದ ಕಣ್ಣಲಿ ದಿಟ್ಟಿಸಿತು ನನ್ನ
ಗಂಡನ ಕಂಡು ನೆಮ್ಮದಿ ಕಂಡಿತು ಮನ
ಎಂದೂ ಕೆಟ್ಟ ಚಟಕೆ ಒಳಗಾಗದವರು
ಹೆಂಡತಿ ಎದುರಲ್ಲಿ ತಲೆ ತಗ್ಗಿಸಿದರು
ಆಣೆ ಪ್ರಮಾಣವು ನಡೆಯುತ್ತಿತ್ತು
ಬಿದ್ದ ಹನಿಗಳು ಹಳೆಯ ನೆನಪು ತಂದಿತು
ನನ್ನ ಪತಿ ದೇವರು ಬಂಗಾರು
ನೆನೆಯುವೆ ಬಂದಾಗ ಮುಂಗಾರು
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ