ಹತ್ತಿರ ಬಂದವನಂತೆ ಬಂದು ದೂರಾಗುವುದೇಕೋ
ಮನದ ತುಂಬಾ ಒಲವ ಜೇನ ಇರಿಸಿ ಮೌನವಾಗುವುದೇಕೋ
ಕಣ್ಣು ತುಂಬಾ ಕನಸು ಹೊತ್ತು ದೃಷ್ಟಿ ಬದಲಿಸುವುದೇಕೋ
ತುಟಿಯಂಚಿನಲಿ ಸಿಹಿ ನಗುವ ಇರಿಸಿ ಬಿಗುಮಾನ ತೋರುವುದೇಕೊ
ಮಗುವಂತಿಹ ಮನದ ಗುಡಿಯಲಿ ಚಿತ್ರ ವಿರಿಸಿಹೆ ನೀನು
ಎದೆಯಲಿ ಮೆಲ್ಲಗೆ ಅರಳಿಹ ಹೂವ ಅರಿತೆ ನಾನು
ಮುಳ್ಳುಗಳ ನಡುವೆ ಮೊಗ್ಗಾದ ಗುಲಾಬಿ ಯಂತೆ
ಕಷ್ಟ ಗಳ ಜೊತೆ ನಮ್ಮಿಬ್ಬರ ಕನಸು ಮರೆಯಾಗದಿರಲಿ
ನೊಂದ ಜೀವಕೆ ತಂಪಾಗಿ ನಾ ಬರುವೆ ಇನಿಯ
ಜೀವಕೆ ಜೀವ ವಾಗಿ ಮನಕೆ ಮಲ್ಲಿಗೆಯಾಗಿ ಸೇರುವೆ ಸನಿಹ
ಮೌನದಲಿ ಮಧುರ ಗೀತೆಯಾಗಿ ಹೃದಯ ಸೇರುವೆ ನಲ್ಲನೆ
ಮರೆತು ಜಗದ ಜಂಜಾಟವನು ಸೇರು ಬಾ ನನ್ನ ಮೆಲ್ಲನೆ
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ