ಎದೆಯ ವೀಣೆಯ ಮೀಟಿದ ನಾದ ...
ಆಸೆಯ ಹೊಮ್ಮಿಸಿದ ನಿನಾದ ...
ಮುರುಳಿಯ ಕೊಳಲ ನಾದ
ಇದೆನಾ ಆ ನಾದ ಮೋಹಕ ನಿನಾದ !೨!
ಬಯಕೆಯ ದೀಪ ಹೊತ್ತಿಸಿದ ನಾದ ...
ಬದುಕಿನ ಬವಣೆ ನೀಗಿಸಿದ ನಿನಾದ...
ಕೃಷ್ಣನ ಉಸಿರಿಂದ ಹೊರಟ ನಾದ
ಇದೇನಾ ಆ ನಾದ ಮೋಹಕ ನಿನಾದ !೨!
ಪ್ರೀತಿಯ ಅರ್ಥ ತಿಳಿಸಿದ ನಾದ ..
ತ್ಯಾಗದ ಅರಿವು ಮೂಡಿಸಿದ ನಿನಾದ...
ಗೊಲ್ಲನ ಪಿಳ್ಳಂಗೋವಿಯ ನಾದ
ಇದೆನಾ ಆ ನಾದ, ಮೋಹಕ ನಿನಾದ !೨!
ರಾಧೆಯ ಮನ ಚೆಂಚಲ ಗೊಂಡ ನಾದ
ಸಖಿಯರ ಹೃದಯ ಸೆಳೆದ ನಿನಾದ
ಪಾಂಡುರಂಗನ ಪವಿತ್ರ ನಾದ ...
ಇದೆನಾ ಆ ನಾದ,ಮೋಹಕ ನಿನಾದ!೩!
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ