ಕಣ್ಣಲ್ಲಿ ನಿನ್ನದೇ ರೂಪ
ಉಸಿರಲ್ಲೇ ನಿನ್ನ ಹೆಸರು !೩!
ಪ್ರೀತಿಗಾಗಿ ನನ್ನ ಹೃದಯ
ಕಾದಿದೆ ಕೇಳೊ ಇನಿಯ !೩!!
ಮಗುವಿನಂಥ ಮನಸು
ಸದಾ ನಿನ್ನದೇ ಕನಸು
ಒಲುಮೆಯ ಈ ಜೀವನ
ನಿನಗೆ ಮುಡಿಪು ಕವನ
ಕಸಿ ಮಾಡಿ ಪ್ರೀತಿಯನು
ಹುಸಿ ಮಾಡದಿರು ಮನವನು
ಹೃದಯದಲ್ಲೊಂದು ರಾಗ
ಮೂಡಿ ಬಂತು ಅನುರಾಗ
ಎದೆಯ ಗೂಡಲ್ಲಿ ಕಾತರಿಕೆ
ಹಗಲಿರುಳು ನಿನ್ನದೆ ಕನವರಿಕೆ
ಕರೆದೆನ್ನ ಬಳಸು ನಡುವ
ಅರಿಯೆ ಏಕೆ ಅಂತರಾಳವ
ಕಣ್ಣಲ್ಲಿ ನಿನ್ನದೇ ರೂಪ
ಉಸಿರಲ್ಲಿ ನಿನ್ನ ಹೆಸರು..
ಸುರಭಿ ಲತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ